This is the title of the web page
This is the title of the web page

archivepolitics

Politics News

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಪ್ರಸ್ತುತ ಮತ ಎಣಿಕೆ ವಿವರ

K2 ಪೊಲಿಟಿಕಲ್ ನ್ಯೂಸ್ : ಬಹಳಷ್ಟು ಕಾತರ ಮೂಡಿಸಿದ ಗುಜರಾತ್ ಮತ್ತು ಉತ್ತರ ಪ್ರದೇಶದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಯಾವ ಪಕ್ಷ ಮುಂದೆ ಇದೆ. ಪ್ರಸ್ತುತ ಮತ ಎಣಿಕೆ ವಿವರ. ಗುಜರಾತ್ ರಾಜ್ಯದ ಪ್ರಸ್ತುತ ಮತ ಎಣಿಕೆ ವಿವರ ಹಿಮಾಚಲ ಪ್ರದೇಶದ ವಿವರ...
Politics News

ಕಾಂಗ್ರೆಸ್ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ : ಸಿಎಂ

K2 ಪೊಲಿಟಿಕಲ್ ನ್ಯೂಸ್ : ಭಾಜಪದ ಜನಸಂಕಲ್ಪ ಯಾತ್ರೆಗೆ ಜನಬೆಂಬಲ ದೊರೆತಿದ್ದು, ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಈ ಸುನಾಮಿಯ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿ ತನ್ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕಳೆದ ಹಲವಾರು ಸಂದರ್ಭಗಳಲ್ಲಿ ಆಯ್ಕೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಂದಾಗಿ ರಾಜ್ಯ ಹಿಂದುಳಿದಿದೆ. ಚುನಾವಣೆ ಸಂದರ್ಭದಲ್ಲಿ ಹಲವಾರು ಭರವಸೆಗಳನ್ನು ನೀಡಿ ಜನರನ್ನು ಕತ್ತಲಲ್ಲಿ ಇಟ್ಟು ಹಿಂದುಳಿಯಲು ಕಾರಣರಾಗಿದ್ದಾರೆ. ಅದಕ್ಕಾಗಿ ಇಲ್ಲಿ ಬದಲಾವಣೆಯ ಅಗತ್ಯವಿದೆ ಎಂದರು. *ವಿಜಯದ ರಥ ಯಾತ್ರೆ* ನಾಳೆ ಗುಜರಾತ್, ಹಿಮಾಚಲ್ ಪ್ರದೇಶ ರಾಜ್ಯಗಳ ಚುನಾವಣಾ ಫಲಿತಾಂಶ ಬರಲಿದೆ. ನಾಳೆ ಇಷ್ಟುಹೊತ್ತಿಗೆ ಇಡೀ ಭಾರತದಲ್ಲಿ ಭಾಜಪ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ವಿಜಯೋತ್ಸವವನ್ನು ಆಚರಿಸುತ್ತೇವೆ. ವಿಜಯದ ರಥ ಯಾತ್ರೆ ಕರ್ನಾಟಕದಲ್ಲಿಯೂ ಮುಂದುವರೆದು 2023 ರಲ್ಲಿ ಭಾಜಪ ವಿಜಯಶಾಲಿಯಾಗಲಿದೆ. ಪ್ರತಿ ತಾಲ್ಲೂಕು, ಜಿಲ್ಲೆಯಲ್ಲಿ ಸಭೆಗಳಲ್ಲಿ...
Politics News

ಕರ್ನಾಟಕದಲ್ಲಿ ಸಮಯಕ್ಕೂ ಮೊದಲೇ ಚುನಾವಣೆ ನಡೆಯುವ ಚರ್ಚೆ..

K2 ನ್ಯೂಸ್ ಡೆಸ್ಕ್ : ಕನಾ೯ಟಕದಲ್ಲಿ ಚುನಾವಣಾ ವಷ೯ ಆರಂಭವಾಗಿದೆ. ಗುಜರಾತ್​ನಲ್ಲಿ ಗೆಲ್ಲುವುದು ಬಿಜೆಪಿ ಅನ್ನೋ ಚುನಾವಣೋತ್ತರ ಸಮೀಕ್ಷೆಗಳು ಹೊರಕ್ಕೆ ಬರುತ್ತಿರುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಸಮಯಕ್ಕೂ ಮೊದಲೇ ಚುನಾವಣೆ ನಡೆಯುವ ಚರ್ಚೆಗಳು ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೊಟ್ಟಿರುವ ಸುಳಿವು. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಅನ್ನೋ ವರದಿಗಳ ಬೆನ್ನಲ್ಲೇ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಮಾತುಕತೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಹಾಗು ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಜೊತೆಗೆ ಜೆಪಿ ನಡ್ಡಾ ಮಹತ್ವದ ಸಭೆ ನಡೆಸಿದ್ದಾರೆ. ಆದರೆ ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವುದು 60 ಸ್ಥಾನಗಳು ಅನ್ನೋದು ಬಹಿರಂಗ ಆಗಿದೆ. ಒಂದು ರಾಜ್ಯದ ಗೆಲುವುದು ಮತ್ತೊಂದು ರಾಜ್ಯದ ಗೆಲುವಿಗೆ ಸ್ಫೂರ್ತಿ ಅನ್ನೋದು ಗೊತ್ತಿರುವ ಸಂಗತಿ. ಇದೀಗ ಗುಜರಾತ್​​ನಲ್ಲಿ ಬಿಜೆಪಿ ಮತ್ತೆ...
Politics News

ಮತ ಪಟ್ಟಿ ಪರಿಷ್ಕರಣ ಕಾರ್ಯಕ್ಕೆ ಶಿಕ್ಷಕರ ನೇಮಕ : ಪಾಠಕ್ಕೆ ಕುತ್ತು..!

K2 ನ್ಯೂಸ್ ಡೆಸ್ಕ್ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ 60,000 ಶಿಕ್ಷಕರನ್ನ ನಿಯೋಜಿಸಿಕೊಂಡಿದ್ದು ಎಲ್ಲೋ ಒಂದು ಕಡೆ ಶೈಕ್ಷಣಿಕ ಹಿನ್ನಡೆಯಾಗುವ ಆತಂಕ ಕಾಡುತ್ತಿದೆ. ಚುನಾವಣಾ ಆಯೋಗ ರಾಜ್ಯದಲ್ಲಿರುವ 45 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಇರುವ ಮಕ್ಕಳಿಗೆ ಪಾಠ ಮಾಡಲು 1.56 ಲಕ್ಷ ಶಿಕ್ಷಕರಿದ್ದು, ಈ ಪೈಕಿ ಸುಮಾರು 60 ಸಾವಿರ ಶಿಕ್ಷಕರನ್ನು ಚುನಾವಣಾ ಮತದಾರ ಪಟ್ಟಿಪರಿಷ್ಕರಣೆಗೆ ಬ್ಲಾಕ್‌ ಹಂತದ ಅಧಿಕಾರಿಗಳಾಗಿ (ಬಿಎಲ್‌ಒ) ನಿಯೋಜಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಶಿಕ್ಷಕರ ಜತೆಗೆ ವಿವಿಧ ಇಲಾಖೆಗಳ ನೌಕರರನ್ನು ಮತದಾರ ಪಟ್ಟಿಪರಿಷ್ಕರಣೆಗೆ ನೇಮಿಸಿಕೊಳ್ಳಲು ಸೂಚಿಸಿದ್ದರೂ ಶಿಕ್ಷಕರನ್ನೇ ಹೆಚ್ಚಾಗಿ ನಿಯೋಜಿಸಿಕೊಂಡಿರುವುದಕ್ಕೆ ಶಿಕ್ಷಕರು, ಪೋಷಕರು ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿ ಶಾಲೆಯಲ್ಲಿ ಒಬ್ಬ ಶಿಕ್ಷಕರನ್ನು...
Politics News

ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವೇ ಇಲ್ಲ..

K2 ನ್ಯೂಸ್ ಡೆಸ್ಕ್ : ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಿಲ್ಲ. ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು ಆದ್ರೆ ಯಾರೂ ಮಾಡಲ್ಲ ಎಂದು ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಎಂದರು. ನಿಜವಾದ ಪ್ರಣಾಳಿಕೆ ಅಂದ್ರೆ ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ವಿವರಗಳನ್ನು ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ.. ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು, ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ಒಳ ಮತ್ತು ಹೋರ ಹರಿವಿನ ವಿವರ ಹಳ್ಳಿ, ವಾರ್ಡ್, ಜಿಲ್ಲೆ, ತಾಲೂಕು ಮಟ್ಟದಿಂದ ಸಾರ್ವಜನಿಕರಿಗೆ ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ..? ನಿಜವಾಗಿ ಬೇಕಾಗಿರುವ ಪ್ರಣಾಳಿಕೆ ! ಇದೆ ಎಂದು ಹೇಳಿದ್ದಾರೆ....
Politics News

ಕಾಂಗ್ರೆಸ್ ಸಂವಿಧಾನ ತಿರುಚಿದೆ: ಸಿಎಂ ಬೊಮ್ಮಾಯಿ

K2 ಪೊಲಿಟಿಕಲ್ ನ್ಯೂಸ್ : ಸಂವಿಧಾನವನ್ನು ತಿರುಚಿರುವುದು ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿಜೆಪಿ ಸಂವಿಧಾನವನ್ನು ತಿರುಚಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ...
1 27 28 29
Page 29 of 29