K2 ನ್ಯೂಸ್ ಡೆಸ್ಕ್ : ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಿಲ್ಲ. ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು ಆದ್ರೆ ಯಾರೂ ಮಾಡಲ್ಲ ಎಂದು ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಎಂದರು.
ನಿಜವಾದ ಪ್ರಣಾಳಿಕೆ ಅಂದ್ರೆ ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ವಿವರಗಳನ್ನು ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ.. ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು, ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ಒಳ ಮತ್ತು ಹೋರ ಹರಿವಿನ ವಿವರ ಹಳ್ಳಿ, ವಾರ್ಡ್, ಜಿಲ್ಲೆ, ತಾಲೂಕು ಮಟ್ಟದಿಂದ ಸಾರ್ವಜನಿಕರಿಗೆ ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ..? ನಿಜವಾಗಿ ಬೇಕಾಗಿರುವ ಪ್ರಣಾಳಿಕೆ ! ಇದೆ ಎಂದು ಹೇಳಿದ್ದಾರೆ.
![]() |
![]() |
![]() |
![]() |
![]() |
[ays_poll id=3]