This is the title of the web page
This is the title of the web page
Politics News

ಕರ್ನಾಟಕದಲ್ಲಿ ಸಮಯಕ್ಕೂ ಮೊದಲೇ ಚುನಾವಣೆ ನಡೆಯುವ ಚರ್ಚೆ..


K2 ನ್ಯೂಸ್ ಡೆಸ್ಕ್ : ಕನಾ೯ಟಕದಲ್ಲಿ ಚುನಾವಣಾ ವಷ೯ ಆರಂಭವಾಗಿದೆ. ಗುಜರಾತ್​ನಲ್ಲಿ ಗೆಲ್ಲುವುದು ಬಿಜೆಪಿ ಅನ್ನೋ ಚುನಾವಣೋತ್ತರ ಸಮೀಕ್ಷೆಗಳು ಹೊರಕ್ಕೆ ಬರುತ್ತಿರುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಸಮಯಕ್ಕೂ ಮೊದಲೇ ಚುನಾವಣೆ ನಡೆಯುವ ಚರ್ಚೆಗಳು ಶುರುವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೊಟ್ಟಿರುವ ಸುಳಿವು. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಅನ್ನೋ ವರದಿಗಳ ಬೆನ್ನಲ್ಲೇ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಮಾತುಕತೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಹಾಗು ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಜೊತೆಗೆ ಜೆಪಿ ನಡ್ಡಾ ಮಹತ್ವದ ಸಭೆ ನಡೆಸಿದ್ದಾರೆ. ಆದರೆ ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವುದು 60 ಸ್ಥಾನಗಳು ಅನ್ನೋದು ಬಹಿರಂಗ ಆಗಿದೆ. ಒಂದು ರಾಜ್ಯದ ಗೆಲುವುದು ಮತ್ತೊಂದು ರಾಜ್ಯದ ಗೆಲುವಿಗೆ ಸ್ಫೂರ್ತಿ ಅನ್ನೋದು ಗೊತ್ತಿರುವ ಸಂಗತಿ. ಇದೀಗ ಗುಜರಾತ್​​ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದರೆ ಕರ್ನಾಟದಲ್ಲಿ 10 ರಿಂದ 20 ಸ್ಥಾನಗಳಲ್ಲಿ ಬಿಜೆಪಿ ಹೆಚ್ಚುವರಿಯಾಗಿ ಗೆಲ್ಲುವ ಸಾಧ್ಯತೆಗಳು ಇರುತ್ತವೆ.

ಇದೇ ಕಾರಣಕ್ಕೆ ಜೆಪಿ ನಡ್ಡಾ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಸಭೆ ನಡೆಸಿ, ರಾಜ್ಯದಲ್ಲಿ ಪಕ್ಷದ ಬಗ್ಗೆ ಇರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಪಕ್ಷದ ಪರ ಯಾವ ರೀತಿ ಜನಾಭಿಪ್ರಾಯ ಇದೆ..? ಅವಧಿಗೂ ಮುನ್ನವೇ ಚುನಾವಣೆಗೆ ಹೋದರೆ ಆಗುವ ಅನುಕೂಲಗಳು ಏನೇನು ಅನ್ನೋ ಬಗ್ಗೆ ಜೆಪಿ‌ ನಡ್ಡಾ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಇದೇ ವೇಳೆ ನಾಲ್ಕು ಸರ್ವೇಗಳ ರಿಪೋರ್ಟ್​ ನಡ್ಡಾ ಕೈ ಸೇರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವರ ಜೊತೆಗೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ. ನಳೀನ್​ ಕುಮಾರ್​ ಕಟೀಲ್​ ಜೊತೆಗೆ ಜೆಪಿ ನಡ್ಡಾ ಸಭೆ ನಡೆಸಿದ್ದು, ನಾಲ್ಕು ಸರ್ವೇ ರಿಪೋರ್ಟ್​ನಲ್ಲಿ ಬಂದಿರುವ ವರದಿ ಬಗ್ಗೆ ನಾಯಕರ ಜೊತೆಗೆ ಚರ್ಚೆ ನಡೆದಿದೆ.

ಈ ವೇಳೆ ಸದ್ಯದ ಲೆಕ್ಕದಲ್ಲಿ ಬಿಜೆಪಿಗೆ 60 ರಿಂದ 70 ಸೀಟು ಬರುತ್ತೆ ಅನ್ನೋ ಮಾಹಿತಿ ಇದೆ. ಬಿಜೆಪಿ ಬಲಶಾಲಿ ಪಕ್ಷವೇ ಆಗಿದ್ದರೂ, ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಇದನ್ನು ನಿವಾರಣೆ ಮಾಡುವುದು ಹೇಗೆ..? ಕಾಂಗ್ರೆಸ್​ ಶಕ್ತಿಯನ್ನು ಕುಗ್ಗಿಸುವುದು ಹೇಗೆ..? ಅನ್ನೋ ಬಗ್ಗೆ ಗಹನವಾದ ಚರ್ಚೆ ನಡೆದಿದೆ. ಬಿಜೆಪಿ ಸರ್ಕಾರದ ವಿರುದ್ಧ ಸೃಷ್ಟಿಯಾಗಿರುವ ಆಡಳಿತ ವಿರೋಧಿ ಅಲೆ ಕಡಿಮೆ ಮಾಡಲು ಅಗತ್ಯ ತಂತ್ರಗಾರಿಕೆ ಮಾಡಲು ನಾಯಕರು ನಿರ್ಧಾರ ಮಾಡಿದ್ದಾರೆ. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್​ ಷಾ ಅವರಿಂದ ಸಲಹೆ ಪಡೆದು ಮುಂದಡಿ ಇಡುವುದಕ್ಕೆ ಸಕಲ ತಯಾರಿ ನಡೆದಿದೆ. ಇದೀಗ ಗುಜರಾತ್​ ಹಾಗು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ರೆ ದೇಶದಲ್ಲಿ ಬಿಜೆಪಿ ಪರವಾದ ಅಲೆಯಿದೆ ಎನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಚುನಾವಣೆ ಹೋಗಬಹುದು.

ಆದರೆ ಕರ್ನಾಟಕದ ಜನರು ಗೆಲ್ಲಿಸ ಬಹುದು ಅಥವಾ ಸೋಲಿಸಲೂ ಬಹುದು. ಆದರೆ ಇನ್ನೂ ನಾಲ್ಕೈದು ತಿಂಗಳು ಚುನಾವಣೆಗೆ ಸಮಯಾವಕಾಶ ಕೊಟ್ಟರೆ ಕಾಂಗ್ರೆಸ್​, ಜೆಡಿಎಸ್​ಗೆ ಸಾಕಷ್ಟು ಅನುಕೂಲ ಆಗಲಿದೆ ಎನ್ನುವುದು ಬಿಜೆಪಿ ಹೈಕಮಾಂಡ್​ ಲೆಕ್ಕಾಚಾರ. ಈಗಾಗಲೇ ಕಾಂಗ್ರೆಸ್​ ಹಾಗು ಜೆಡಿಎಸ್​ ನಡೆಸುತ್ತಿರುವ ಱಲಿಗಳಿಗೆ ಜನರು ಸಾಗರೋಪಾದಿಯಲ್ಲಿ ಸೇರುತ್ತಿದ್ದಾರೆ. ಬಿಜೆಪಿ ಸಮಾವೇಶಗಳಲ್ಲಿ ಕುರ್ಚಿಗಳು ಖಾಲಿ ಉಳಿದಿರುವ ಬಗ್ಗೆಯೂ ಮಾಹಿತಿಯಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತ್ತಷ್ಟು ಕಷ್ಟ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಅವಧಿಗೂ ಮುನ್ನವೇ ಚುನಾವಣೆ ಮಾಡುವ ಮೂಲಕ ಕಾಂಗ್ರೆಸ್​ – ಜೆಡಿಎಸ್​ ಕಟ್ಟಿ ಹಾಕುವ ಪ್ರಯತ್ನಕ್ಕೆ ಮುಂದಾಗುವ ಸಾಧ್ಯತೆ ಇದೆ. ಆದರೆ ಪ್ರಧಾನಿ ಮೋದಿ ಹಾಗು ಅಮಿತ್​ ಷಾ ಗ್ರೀನ್​ ಸಿಗ್ನಲ್​ ಸಿಕ್ಕರಷ್ಟೇ ಅನ್ನೋದು ಅಂತಿಮ


[ays_poll id=3]