This is the title of the web page
This is the title of the web page
Politics News

ಕಾಂಗ್ರೆಸ್ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ : ಸಿಎಂ


K2 ಪೊಲಿಟಿಕಲ್ ನ್ಯೂಸ್ : ಭಾಜಪದ ಜನಸಂಕಲ್ಪ ಯಾತ್ರೆಗೆ ಜನಬೆಂಬಲ ದೊರೆತಿದ್ದು, ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಈ ಸುನಾಮಿಯ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿ ತನ್ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಳೆದ ಹಲವಾರು ಸಂದರ್ಭಗಳಲ್ಲಿ ಆಯ್ಕೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಂದಾಗಿ ರಾಜ್ಯ ಹಿಂದುಳಿದಿದೆ. ಚುನಾವಣೆ ಸಂದರ್ಭದಲ್ಲಿ ಹಲವಾರು ಭರವಸೆಗಳನ್ನು ನೀಡಿ ಜನರನ್ನು ಕತ್ತಲಲ್ಲಿ ಇಟ್ಟು ಹಿಂದುಳಿಯಲು ಕಾರಣರಾಗಿದ್ದಾರೆ. ಅದಕ್ಕಾಗಿ ಇಲ್ಲಿ ಬದಲಾವಣೆಯ ಅಗತ್ಯವಿದೆ ಎಂದರು.

*ವಿಜಯದ ರಥ ಯಾತ್ರೆ*
ನಾಳೆ ಗುಜರಾತ್, ಹಿಮಾಚಲ್ ಪ್ರದೇಶ ರಾಜ್ಯಗಳ ಚುನಾವಣಾ ಫಲಿತಾಂಶ ಬರಲಿದೆ. ನಾಳೆ ಇಷ್ಟುಹೊತ್ತಿಗೆ ಇಡೀ ಭಾರತದಲ್ಲಿ ಭಾಜಪ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ವಿಜಯೋತ್ಸವವನ್ನು ಆಚರಿಸುತ್ತೇವೆ. ವಿಜಯದ ರಥ ಯಾತ್ರೆ ಕರ್ನಾಟಕದಲ್ಲಿಯೂ ಮುಂದುವರೆದು 2023 ರಲ್ಲಿ ಭಾಜಪ ವಿಜಯಶಾಲಿಯಾಗಲಿದೆ. ಪ್ರತಿ ತಾಲ್ಲೂಕು, ಜಿಲ್ಲೆಯಲ್ಲಿ ಸಭೆಗಳಲ್ಲಿ ಸೇರಿರುವ ಜನರ ಉತ್ಸಾಹ ಕಂಡು ವಿಜಯಸಂಕಲ್ಪ ಯಾತ್ರೆಯಾಗಿ ಪರಿವರ್ತನೆಯಾಗಲಿದೆ.

*ಕಾಂಗ್ರೆಸ್ ನಿರ್ನಾಮ*
ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರದಲ್ಲಿ ನಿರ್ನಾಮವಾಗಿದೆ. ಇಲ್ಲಿಯೂ ನಿರ್ನಾಮವಾಗಲಿದೆ. ಕಾಂಗ್ರೆಸ್ ಮುಳುಗುತ್ತಿರವ ಹಡಗು. ಪರಮೇಶ್ವರ್ ಅವರಿಗೆ ಅತಿ ಹೆಚ್ಚಿನ ವೈರಿಗಳು ಕಾಂಗ್ರೆಸ್ ನಲ್ಲಿದ್ದಾರೆ. ಅವರನ್ನು ಸೋಲಿಸುವ ಕೆಲಸ ಕಾಂಗ್ರೆಸ್ ಮಾಡುತ್ತದೆ. ನಾವು ಭಾಜಪದಲ್ಲಿ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು. ಈ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೊರಟಗೆರೆ ತಾಲ್ಲೂಕನ್ನು ಮಾದರಿ ತಾಲ್ಲೂಕು ಆಗಿಸಲು ಸಂಕಲ್ಪ ಮಾಡಿದ್ದೇವೆ ಎಂದರು.

*ವಿಶ್ವಮಾನ್ಯತೆ*
ನಮ್ಮ ಪ್ರಧಾನಿಗಳು ಇಡೀ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ. ಕಾಂಗ್ರೆಸ್ಸಿನ ಪ್ರಧಾನಿಗಳು ಬೇರೆ ದೇಶಕ್ಕೆ ಹೋದರೆ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರಿಗೆ ವಿಶ್ವವೇ ಮಾನ್ಯತೆ ನೀಡಿದೆ. ಅವರ ನಾಯಕತ್ವಕ್ಕೆ ಮನ್ನಣೆ ದೊರೆತಿದೆ. ಮೋದಿ ಅವರ ಕಾರ್ಯಕ್ರಮಗಳ ಪೈಕಿ ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಿ 10 ಕೋಟಿ ಗೂ ಹೆಚ್ಚು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಿದ್ದಾರೆ.

ರಾಜ್ಯದಲ್ಲಿ 75 ವರ್ಷಗಳು ಸೇರಿ ಕೇವಲ 25 ಲಕ್ಷ ಮನೆಗಳಗೆ ನಲ್ಲಿ ಸಂಪರ್ಕ ನೀಡಿದ್ದರು. ನಮ್ಮ ಸರ್ಕಾರ ಕಳೆದ 2 ವರ್ಷಗಳಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ. ಇದು ಅಭಿವೃದ್ಧಿ. ಒಂದೇ ವರ್ಷದಲ್ಲಿ 30 ಲಕಷ್ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು ಯೋಜನೆ ರೂಪಿಸಿದ್ದು, ಈಗಾಗಲೇ 13 ಲಕ್ಷ ಮನೆಗಳಿಗೆ ನೀರು ಕೊಡಲಾಗುವುದು ಎಂದರು.

*ರಾಜಕೀಯ ಇಚ್ಛಾಶಕ್ತಿಯನ್ನು ತೋರಿಲ್ಲ.*
ಅಲ್ಪಸಂಖ್ಯಾತರು, ಹಿಂದುಳಿದವರು, ದೀನದಲಿತರ ಹೆಸರಿನಲ್ಲಿ ಕಲ್ಯಾಣ ಮಾಡುವುದಾಗಿ ಹೇಳುತ್ತಿದ್ದರು. ಯಾರೋ ಒಬ್ಬರು ಅಧಿಕಾರಿಯಿಂದ ಜನ ಉದ್ಧಾರವಾಗುವುದಿಲ್ಲ. ಹಳ್ಳಿಯಲ್ಲಿರುವ ಕೂಲಿಕಾರ, ದೀನದಲಿತರ ಬದುಕು ಉದ್ದಾರವಾಗಬೇಕು. ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿಯನ್ನು ಹೆಚ್ಚಿಸಿದೆ. ಮಲ್ಲಿಕಾರ್ಜು ಖರ್ಗೆ, ಸಿದ್ಧರಾಮಯ್ಯ ಅವರು ಯಾಕೆ ಮೀಸಲಾತಿ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಲ್ಲ. ಭಾಜಪ ಸರ್ಕಾರ ಬರಬೇಕಾಯಿತು ಇದನ್ನು ಮಾಡಲು.

ಅವರ ಮತ ಪಡೆದು, ಅಧಿಕಾರವನ್ನು ಮಾಡಿ, ಮನೆಗಳ ಮೇಲೆ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರನ್ನು ಗುಡಿಸಿಲಲ್ಲಿಯೇ ಇಟ್ಟಿದ್ದಾರೆ. ದುಡಿಯುವ ವರ್ಗವನ್ನು ಕಡೆಗಣಿಸಲಾಗಿದೆ. ದೀನದಲಿತ, ಹಿಂದುಳಿದ ವರ್ಗದವರ ಬೆಂಬಲ ಇರುವವವರೆಗೂ ಯಾರಿಗೂ ಅಂಜುವುದಿಲ್ಲ. ಯಾವುದೇ ಅಡ್ಡಿ ಆತಂಕ ಬಂದಾಗ ನನಗೆ ಶಕ್ತಿ ತುಂಬಿದ್ದೀರಿ,. ಜನಶಕ್ತಿಯ ಮುಂದೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಶಕ್ತಿ ನಡೆಯುವುದಿಲ್ಲ ಎಂದರು.
ವಕ್ಫ್ ಮಂಡಳಿ ಆಸ್ತಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ.

ಐದು ಸಾವಿರ ಕೋಟಿ ರೂ.ಗಳಷ್ಟು ಮುಸಲ್ಮಾನರ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನವರು ತಿಂದು ತೇಗಿದ್ದಾರೆ. ಆ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಅವರ ಆಸ್ತಿಯನ್ನು ಲೂಟಿ ಮಾಡಿದ್ದಾರೆ. ಅವರ ಮತ ಕೇಳುವ ನೈತಿಕ ಹಕ್ಕಿಲ್ಲ. ಜನರಿಗೆ ಒಳಸಂಚು ಅರ್ಥವಾಗಿದೆ ಎಂದರು. ದೇಶ ಭಕ್ತಿಯ ಪಾಠ ಕಾಂಗ್ರೆಸ್ಸಿನಿಂದ ಕಲಿಯಬೇಕಿಲ್ಲ. ರಾಹುಲ್ ಗಾಂಧಿ ಸಿಯಾ ರಾಮ್ ಎನ್ನುವುದಿಲ್ಲ ಎಂದಿದ್ದಾರೆ. ರಾಮನಲ್ಲಿ ಸೀತೆ, ಲಕ್ಷ್ಮಣ, ಹನುಮರೂ ಇದ್ದಾರೆ. ಇಷ್ಟು ಪ್ರಾಥಮಿಕ ಜ್ಞಾನ ಅವರಿಗೆ ಇಲ್ಲ. ಭಾರತ್ ಮಾತಾಕಿ ಜೈ ಎನ್ನುವುದು ಭಾಜಪದ ಘೋಷಣೆ, ನಂಬಿಕೆ ಮತ್ತು ವಿಶ್ವಾಸ. ಕಾಂಗ್ರೆಸ್ ಪಕ್ಷದ್ದು ಸೋನಿಯಾ ಮಾತಾಕಿ ಜೈ. ಜನ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ದೇಶ ಭಕ್ತಿಯ ಪಾಠ ಇವರಿಂದ ಕಲಿಯಬೇಕಿಲ್ಲ ಎಂದರು.


[ays_poll id=3]