This is the title of the web page
This is the title of the web page
Crime News

ಶೀಲಶಂಕಿಸಿ ಹೆಂಡತಿಯನ್ನು ಕೊಂದ ಪತಿ


ಸಿಂಧನೂರು : ಹೆಂಡತಿಯ ಶೀಲಾ ಶಂಕಿಸಿದ ಪತಿ ಹೆಂಡತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಂಧನೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪತಿಯೊಬ್ಬ ಶೀಲಶಂಕಿಸಿ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಶಿಲ್ಪಾ(27) ಮೃತ ಮಹಿಳೆಯಾಗಿದ್ದು, ಪತಿ ಸಿದ್ದು ಕೊಲೆಗೈದಿದ್ದಾನೆ.

ಕಳೆದ ರಾತ್ರಿ ಪತಿ ಸಿದ್ದು ಪತ್ನಿಯ ಶೀಲಾ ಶಂಕಿಸಿ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವಿನ ವಾಗ್ವಾವಾದ ತಾರಕಕ್ಕೆ ಏರಿ ಪತ್ನಿ ಶಿಲ್ಪಾಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪತ್ನಿಶಿಲ್ಪ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಆರೋಪಿ ಸಿದ್ದುನನ್ನ ವಶಪಡಿಸಿಕೊಂಡ ಸಿಂಧನೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ


[ays_poll id=3]