This is the title of the web page
This is the title of the web page
State News

ಹೂವುಗಳಲ್ಲಿ ಅರಳಿದ ಚಂದ್ರಯಾನ ವಿಕ್ರಂ ರೋವರ್..


K2kannadanews.in

Fruit show

ರಾಯಚೂರು : ಇಂದಿನಿಂದ ಮೂರು ದಿನಗಳ (3 days) ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ, ವಿವಿಧ ಪುಷ್ಪಗಳಿಂದ (Flowers) ಸಿದ್ದಪಡಿಸಿರುವ ಇಸ್ರೋ (ISRO) ಮಾದರಿಯ ರಾಕೆಟ್ (Rocket) ಮತ್ತು ವಿಕ್ರಂ ರೋವರ್ (Rowar) ಆಕರ್ಷಣೆಯಾಗಿವೆ.

ರಾಯಚೂರು ನಗರದ ಸಾರ್ವಜನಿಕ ಉದ್ಯಾನವನದಲ್ಲಿ(Public Garden) ಇರುವಂತಹ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಸಲಾಗುತ್ತಿರುವ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನದಲ್ಲಿ ಸಾಕಷ್ಟು ಆಕರ್ಷಣೀಯ ಪ್ರತಿಕೃತಿಗಳನ್ನು ಸಿದ್ಧಪಡಿಸಲಾಗಿದೆ. ವಿವಿಧ ಪುಷ್ಪಗಳಿಂದ ಶಿವನ ಲಿಂಗು, ಇಸ್ರೋ ರಾಕೆಟ್ ಮತ್ತು ವಿಕ್ರಂ ರೋವರ್ ಪ್ರತಿಕೃತಿ ಸಿದ್ಧಪಡಿಸಿದ್ದು, ಈ ಫಲಪುಷ್ಪ ಪ್ರದರ್ಶನ ಆಕರ್ಷಣೆಯಾಗಿದೆ. ವಿಶೇಷವಾಗಿ ಬಿದಿರಿನಲ್ಲಿ ಗಣೇಶನ ಪ್ರತಿಕೃತಿ ಸಿದ್ಧಪಡಿಸಿದ್ದು ಇದು ಕೂಡ ಆಕರ್ಷಣೀಯವಾಗಿದ್ದು, ಈ ಒಂದು ಫಲಪುಷ್ಪ ಪ್ರದರ್ಶನದ ಆಕರ್ಷಣೀಯ ಪ್ರತಿಕೃತಿಗಳಾಗಿವೆ.

ಇದರ ಜೊತೆಗೆ ರೈತರಿಗೆ (Famers) ತೋಟಗಾರಿಕೆ ಇಲಾಖೆ ಬೆಳೆಗಳ ಬಗ್ಗೆ ಮಾಹಿತಿ ಮತ್ತು ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.


[ays_poll id=3]