This is the title of the web page
This is the title of the web page
National News

60ವಷ೯ದ ಪುರುಷನ ಹೊಟ್ಟೆಯಲ್ಲಿ ಅವಳಿ ಬ್ರೂಣ ಪತ್ತೆ..!


K2 ನ್ಯೂಸ್ ಡೆಸ್ಕ್ : 60ವಷ೯ದ ವೃದ್ಧನ ಹೊಟ್ಟೆಯಲ್ಲಿ ಅವಳಿ ಬ್ರೂಣ ಪತ್ತೆಯಾಗಿದ್ದು, ಇದು ಗರ್ಭಾವಸ್ಥೆಯಲ್ಲೇ ಮೃತಪಟ್ಟಿದೆ, ಈ ಅಪರೂಪದ ದೈಹಿಕ ಸ್ಥಿತಿಯನ್ನು ಫೀಟಸ್ ಇನ್ ಫೆಟು ಎಂದು ಕರೆಯಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಒಂದು ಘಟನೆ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.

ಹೌದು ಈ ವ್ಯಕ್ತಿಗೆ 1999ರಲ್ಲೇ ಹೊಟ್ಟೆಯ ಉಬ್ಬರ ಕಾಣಿಸಿಕೊಂಡಿತು. ಉಸಿರಾಡಲು ಕಷ್ಟವಾದಾಗ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು. ವ್ಯಕ್ತಿ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದು ಮೊದಲು ವೈದ್ಯರು ಊಹಿಸಿದರು. ಆದರೆ ಚಿಕಿತ್ಸೆ ಆರಂಭಿಸಿದ ನಂತರ ವ್ಯಕ್ತಿಯ ಹೊಟ್ಟೆಯಲ್ಲಿ ಬ್ರೂಣ ಇರುವುದು ವೈದ್ಯರಿಗೆ ಕಂಡುಬಂತು. ಶಸ್ತ್ರಚಿಕಿತ್ಸೆ ಮೂಲಕ ಈಗ ಅದನ್ನು ಹೊರತೆಗೆಯಲಾಗಿದೆ. ಬ್ರೂಣದಲ್ಲಿ ಕೂದಲಿನ ಭಾಗಗಳು, ದವಡೆಗಳು, ಕೈಕಾಲುಗಳು, ಜನನಾಂಗದ ಭಾಗಗಳು ಇದ್ದವು.

ಇದು ನಮಗೆ ಆಘಾತಕಾರಿ ಸಂಗತಿಯಾಗಿತ್ತು. ನಾವು ಕೆಲಕಾಲ ಗಾಬರಿ, ಗೊಂದಲಕ್ಕೀಡಾದೆವು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಫೆಟಸ್-ಇನ್-ಫೀಟು (ಎಫ್​ಐಎಫ್) ಅಪರೂಪದ ಘಟನೆಯಾಗಿದೆ. ಒಂದು ದೋಷಪೂರಿತ ಕಶೇರುಕ ಭ್ರೂಣವು ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ. ಈವರೆಗೆ ವಿಶ್ವದಲ್ಲೇ 100ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)


[ays_poll id=3]