This is the title of the web page
This is the title of the web page
Local News

ಜೆಸಿಬಿ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ ಆಮ್ ಆದ್ಮಿಗೆ ಬೆಂಬಲಿಸುತ್ತಾರೆ ಜನ

ರಾಯಚೂರು : ನನ್ನ ಉಸಿರು ಇರುವವರೆಗೂ ಗ್ರಾಮೀಣ ಮತ ಕ್ಷೇತ್ರ ಬಿಟ್ಟು ಹೋಗಲಾರೆ ಸೋಲು ಗೆಲವು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಗ್ರಾಮೀಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಕಾಕ್ಷಿ ಡಾ.ಸುಭಾಷಚಂದ್ರ ಸಬಾಜಿ ಹೇಳಿದರು. ನಾನು ಬೇರೆ ದೇಶದಿಂದ ಬಂದವನಲ್ಲ ನಾನು ಕರ್ನಾಟಕದ ಪಕ್ಕದ ಬೀದರ್ ಜಿಲ್ಲೆಯವರು ರಾಯಚೂರು ಜಿಲ್ಲೆಯಲ್ಲಿ 20 ವರ್ಷಗಳ ಕಾಲ ಸರ್ಕಾರಿ ಸೇವಕನಾಗಿ ಕೆಲಸ ಮಾಡಿದ್ದೇನೆ ಜಿಲ್ಲೆಯ ಜನರ ಜೊತೆ ಬಹಳಷ್ಟು ಒಡನಾಟ ಹೊಂದಿದ್ದೇನೆ ನನಗೆ ಆಗದಿರುವವರು ಚುನಾವಣೆ ನಂತರ ವಾಪಸ್ ಬೀದರ್ ಗೆ ಹೋಗುತ್ತಾರೆ ಎಂದು ಹೇಳುತ್ತಿದ್ದಾರಂತೆ ಅದನ್ನ ಕೇಳಿಮನಸ್ಸಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಸತ್ಯ ಹೇಳುತ್ತೇನೆ ನನ್ನ ಉಸಿರು ಇರುವವರೆಗೂ ರಾಯಚೂರು ಗ್ರಾಮೀಣ ಮತ ಕ್ಷೇತ್ರದಲ್ಲಿ ಇರುತ್ತೇನೆ ಕ್ಷೇತ್ರದ ಜನತೆಯನ್ನು ಬಿಟ್ಟು ಹೋಗುವುದಿಲ್ಲ. 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಲು ಗೆಲುವು ಸಮಾನವಾಗಿ ಕರಿಸುತ್ತೇನೆ. ಪ್ರಾಣ ಇರುವವರೆಗೂ ಜನರ...
Crime News

ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಮೂವರ ಸಾವು

ರಾಯಚೂರು : ಗುಡದೂರು ನಾಲೆ ಬಳಿ ಬೈಕ್ ಮತ್ತು KSRTC ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಮೂವರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.   ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದ ನಾಲೆ ಬಳಿ ಘಟನೆ ಸಂಭವಿಸಿದೆ. ಮೃತ ಮೂವರು ವ್ಯಕ್ತಿಗಳನ್ನು ಆಂಧ್ರ ಮೂಲದ ನಂದ್ಯಾಲ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಶ್ರೀನಿವಾಸ್(26), ಜೈಪಾಲ್(19), ನಾಗರಾಜ್(30) ಮೃತರು ಎನ್ನಲಾಗಿದೆ. ಮಸ್ಕಿ ಪಟ್ಟಣದಲ್ಲಿ ಊಟ ಮುಗಿಸಿಕೊಂಡು ನಾಲ್ಕು ಜನ ಬೈಕ್ ನಲ್ಲಿ ತೆರಳುವಾಗ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಭತ್ತದ ಕಟಾವ್ ಮೀಷನ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇವರಾಗಿದ್ದು, ನಿನ್ನೆ ರಾತ್ರಿ ಊಟಕ್ಕೆಂದು ಮಸ್ಕಿ ಪಟ್ಟಣಕ್ಕೆ ಬಂದಿದ್ದಾರೆ. ವಾಪಸ್ ಆಗುತ್ತಿದ್ದ ವೇಳೆ ಬೈಕ್ ದಾರುಣ ಘಟನೆ ಸಂಭವಿಸಿದೆ ಎಂದು...
State News

ರಾಯಚೂರು ರಾಜ್ಯದಲ್ಲಿ ಹೆಚ್ಚಿದೆ ಮೆದುಳು ಜ್ವರದ ಭೀತಿ : ಮಕ್ಕಳೇ ಇದರ ಟಾರ್ಗೆಟ್

K2 ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಹರಡುತ್ತಿದೆ ಮೆದುಳು ಜ್ವರ, ಜೆಇ ಮೆದುಳು ಜ್ವರ 'ಪ್ಲೇವಿವೈರಸ್' ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮಾನವರು ಕಟ್ಟಕಡೆಯ ಹೋಸ್ಟ್ ಆಗಿರುತ್ತಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜಪಾನೀಸ್ ಎನ್ ಸೆಫಲೈಟಿಸ್ ಮೆದುಳು ಜ್ವರ ನಿಯಂತ್ರಣಕ್ಕಾಗಿ ಡಿಸೆಂಬರ್ 5 ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ 1-15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ. ಜೆಇ ಲಸಿಕಾ ಅಭಿಯಾನ ಕುರಿತು ಮಾಹಿತಿ ನೀಡಿದ ಸಚಿವರು, ಡಿಸೆಂಬರ್ ಮೊದಲನೇ ವಾರದಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು...
State News

ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ – ಸಿಎಂ

K2 ನ್ಯೂಸ್ ಡೆಸ್ಕ್ : ನನ್ನ ಕ್ಷೇತ್ರದ ಜನ ನನ್ನನ್ನ ಬಹಳ ಪ್ರೀತಿ ಮಾಡ್ತಾರೆ. ನನ್ನ ಕ್ಷೇತ್ರಕ್ಕೆ ಬಂದಾಗ ಅವರಿಗೆ ವಿಶೇಷವಾದ ಸಮಯ ಕೊಡುವ ಅವಶ್ಯಕತೆ ಇದೆ. ಅವರಿಗೆ ತಮ್ಮ ಅವಹಾಲುಗಳನ್ನು ಹೇಳಲು ಅವಕಾಶ ಮಾಡಿಕೊಟ್ಟಿದ್ದೆ. ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಶಿಗ್ಗಾಂವಿಯಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದರು. ನಮ್ಮ ಕ್ಷೇತ್ರದ ಜನತೆ ಮಾತ್ರವಲ್ಲದೇ ಬೆಳಗಾವಿ, ಬಳ್ಳಾರಿ, ಕುಂದಗೋಳ, ಹಾನಗಲ್ ಜನತೆ ಸಹ ಬಂದು ಅವಹಾಲು ಸಲ್ಲಿಸಿದ್ದಾರೆ. ಹೆಚ್ಚಿನವರು ಕೆಲಸ ಮತ್ತು ತಮ್ಮ ಮನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತಮ್ಮ ಊರಿನ ಅಭಿವೃದ್ಧಿಯ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜನರ ಅವಹಾಲುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸ ಆಗುತ್ತದೆ ಎಂದು ಮುಖ್ಯಮಂತ್ರಿ...
State News

ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ: ಮುಖ್ಯಮಂತ್ರಿ

K2 ನ್ಯೂಸ್ ಡೆಸ್ಕ್ : ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಯಾವುದು ಅಸಾಧ್ಯವಲ್ಲ. ಎಲ್ಲವೂ ಸಾಧ್ಯ. ಆತ್ಮವಿಶ್ವಾಸ ಇರಬೇಕು. ನಿಮ್ಮ ಮೇಲೆ ವಿಶ್ವಾಸ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಒಂದು ಸಂಸ್ಥೆಗೆ 150 ವರ್ಷ ಆಗುತ್ತಿದೆ ಎಂದರೆ ಅದು ಒಂದು ಇತಿಹಾಸ. ಒಬ್ಬ ಮನುಷ್ಯನಿಗೆ ನೂರು ವರ್ಷ ವಯಸ್ಸು ಆಗಬಹುದು. ಆದರೆ ಒಂದು ಸಂಸ್ಥೆ 150 ವರ್ಷವಾದರೆ ಇಲ್ಲಿ ಕಲಿತವರು ಯಾವ ಯಾವ ಸ್ಥಾನದಲ್ಲಿದ್ದಾರೆ ಅನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಸ್ವತಂತ್ರ ಪೂರ್ವದ ಚಿತ್ರವನ್ನು ನಾವು ನೆನಪು ಮಾಡಿಕೊಂಡರೆ, ಆಗ ಶಾಲೆಗಳ ಸಂಖ್ಯೆ ಬಹಳ ವಿರಳ. ಹೀಗಾಗಿ ಅವತ್ತಿನ ನಮ್ಮ ಹಿರಿಯರು ಬಹಳ ದೂರದೃಷ್ಟಿ ಇಟ್ಟುಕೊಂಡು, ಪ್ರಗತಿಪರ ವಿಚಾರವನ್ನಿಟ್ಟುಕೊಂಡು ಈ ಶಾಲೆ ಪ್ರಾರಂಭ ಮಾಡಿದ್ದಾರೆ. ಆ ಶಾಲೆ ಪ್ರಾರಂಭ ಮಾಡಿದ ಹಿರಿಯರಿಗೆ, ಇಲ್ಲಿ ಬಂದು ವಿಧ್ಯರ್ಜನೆ ಮಾಡಿದ ಶಿಕ್ಷಕರಿಗೆ, ಮೊದಲು ವಿದ್ಯಾಭ್ಯಾಸ ಮಾಡಿದ...
Local News

ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ

ರಾಯಚೂರು : ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ರೈತರ ನಿಗದಿತ ಬೆಲೆ ಮಾರಾಟ ಮಾಡುವಂತಹ ಪ್ರಯತ್ನ ಮಾಡುತ್ತೇನೆ ಎಂದು ನಗರ ಶಾಸಕಾಂಗಕ್ಕೆ ಶಿವರಾಜ್ ಪಾಟೀಲ್ ಹೇಳಿದರು. ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ನೇರವಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಅವಕಾಶ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡಲು ಅನೇಕ ಅಡೆತಡೆಗಳು ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಿ ಮಾರುಕಟ್ಟೆ ಸ್ಥಾಪನೆ ಮಾಡಲಾಯಿತು ಎಂದರು. ಇದು ರೈತರ ಉತ್ಪನ್ನ ಮಾರುಕಟ್ಟೆ ರೈತರಿಗೆ ಸೀಮಿತವಾಗಬೇಕು. ರೈತರ ಬೆಳೆದ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಖರೀದಿ ವ್ಯಾಪಾರಸ್ಥರು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದರು.‌ರೈತರ ಬೆಲೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ರೈತರಿಗೆ ಮತ್ತು...
Local News

ಮಲ್ಲಿಕಾರ್ಜುನ್ ಖರ್ಗೆ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ

ರಾಯಚೂರು : ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಸೇರಿದಂತೆ ಸರ್ವಾಗಿಣ ಅಭಿವೃದ್ಧಿಗಾಗಿ 371ಜೆ ವಿಷೇಶ ಸ್ಥಾನ ಮಾನ ಸಿಕ್ಕಿರುವುದು ಮಲ್ಲಿಕಾರ್ಜುನ್ ಖರ್ಗೇ ನಾಯಕತ್ವದ ಹೋರಾಟಕ್ಕೆ ಸಿಕ್ಕ ಫಲ ಎಂದು ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ತಿಳಿಸಿದರು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನವೆಂಬರ್ 10ರಂದು ನಡೆಯುವ ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 7 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಸಲ್ಲಿಸಿದ ಅವರ ಸಾಮಾಜಿಕ ಸೇವೆ ಅಗಣಿತವಾಗಿದೆ. ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರದ ಅವಧಿಯಲ್ಲಿ 371ಜೆ ಅನುಮೋದಿಸಲು ಸಾದ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಅನುಮೋದಿಸಿ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ ಹಾಗಾಗಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವರಿಗೆ ಅಭಿನಂದಿಸಬೇಕೆಂದು ತಿಳಿಸಿದರು. ನಂತರ ಬಿ.ವಿ ನಾಯಕ್...
Crime News

ಸಿನಿಮಾ ರೀತಿಯಲ್ಲಿ ಒಂದು ಲಕ್ಷ ಹಣ ಇರುವ ಬ್ಯಾಗ್ ಎಗರಿಸಿದ ಖದೀಮರು

K2 ನ್ಯೂಸ್ ಡೆಸ್ಕ್ : ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮಾಡಿ ಸಿನಿಮಾ ರೀತಿಯಲ್ಲಿ ಹಣ ಇರುವ ಬ್ಯಾಕ್ ಅಪಹರಿಸಿ ಪರಾರಿಯಾದ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ಕ್ವಾಟರ್ಸ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಮೊಗಲಾ ತಾಂಡಾದ ಶಂಕರ ರಾಠೋಡ್ ಎಂಬುವವರು ಚಿತ್ತಾಪುರದ ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್ ಮೇಲೆ ರೈಲ್ವೆ ಕ್ವಾಟರ್ಸ ಕಡೆಗೆ ಹೊರಟಿದ್ದರು. ಇದನ್ನು ಗಮನಿಸಿದ ಇಬ್ಬರು ಸುಲಿಗೆಕೋರರು ಅವರನ್ನು ಹಿಂಬಾಲಿಸಿ 1.40 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಖದೀಮರು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ. ಶಂಕರ ರಾಠೋಡ್ ಅವರು ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಪಡೆದಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,...
Local News

ನೂತನ ಶಿಲಾಸ್ತಂಬ ದೇವಸ್ಥಾನ ಶಿಲನ್ಯಾಸ ಕಾರ್ಯಕ್ರಮ

ರಾಯಚೂರು : ಸಿದ್ದಿ ಪರ್ವತ ಅಂಬಾದೇವಿ ದೇವಸ್ಥಾನದ ನೂತನ ಶಿಲಾ ಸ್ತಂಭ ದೇವಸ್ಥಾನ ಶಿಲನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಒಂದು ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದಾರೆ ಎಂದು ತಹಸೀಲ್ದಾರ್ ಹೆಚ್ ದೇಸಾಯಿ ಹೇಳಿದರು. ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಇರುವ ಅಂಬಾದೇವಿ ದೇವಸ್ಥಾನದ ಶಿಲಾಸ್ತಂಬ ಮತ್ತು ಶಿಲನ್ಯಾಸ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜಿಲ್ಲೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಮುನೇನಕೊಪ್ಪ ಅವರು ಆಗಮಿಸುತ್ತಿದ್ದು, ಕಾರಣ ಈ ಒಂದು ಕಾರ್ಯಕ್ರಮದಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಹಸಿಲ್ದಾರ್ ಅರುಣ್ ಹೆಚ್ ದೇಸಾಯಿ ಹೇಳಿದರು....
Crime NewsLocal News

ಭೀಕರ ಅಪಘಾತ ಇಬ್ಬರು ಸಾವು

ರಾಯಚೂರು : ಲಾರಿ-ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಯರಗೇರಾ ಗ್ರಾಮದ ಹತ್ತಿರ ಘಟನೆ ಸಂಭವಿಸಿದೆ. ಮೃತರನ್ನು ಶರತ್, ಪ್ರವೀಣ್ ಎಂದು ಗುರುತಿಸಲಾಗಿದೆ.‌ ರಾಯಚೂರು ನಗರದ ಮಡ್ಡಿಪೇಟೆ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಯರಗೇರಾದಿಂದ ಬೈಕ್ ಸವಾರರು ರಾಯಚೂರು ಕಡೆ ಬರುವಾಗ, ರಾಯಚೂರಿನಿಂದ ಮಂತ್ರಾಲಯಕ್ಕೆ ಹೋಗುವಾಗ ಮಾರ್ಗಮಧ್ಯ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿ, ತನಿಖೆ ಮುಂದುವರೆಸಿದ್ದಾರೆ....
1 18 19 20 21 22 24
Page 20 of 24