K2 ನ್ಯೂಸ್ ಡೆಸ್ಕ್ : ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮಾಡಿ ಸಿನಿಮಾ ರೀತಿಯಲ್ಲಿ ಹಣ ಇರುವ ಬ್ಯಾಕ್ ಅಪಹರಿಸಿ ಪರಾರಿಯಾದ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ಕ್ವಾಟರ್ಸ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ಮೊಗಲಾ ತಾಂಡಾದ ಶಂಕರ ರಾಠೋಡ್ ಎಂಬುವವರು ಚಿತ್ತಾಪುರದ ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್ ಮೇಲೆ ರೈಲ್ವೆ ಕ್ವಾಟರ್ಸ ಕಡೆಗೆ ಹೊರಟಿದ್ದರು. ಇದನ್ನು ಗಮನಿಸಿದ ಇಬ್ಬರು ಸುಲಿಗೆಕೋರರು ಅವರನ್ನು ಹಿಂಬಾಲಿಸಿ 1.40 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಖದೀಮರು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ. ಶಂಕರ ರಾಠೋಡ್ ಅವರು ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಪಡೆದಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]