
ಸಿಂಧನೂರು : ಜವಳಗೇರಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಬಳಗಾನೂರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದ ಹತ್ತಿರ, ರಾಯಚೂರು ಮುಖ್ಯ ರಸ್ತೆಗೆ ಹೊಂದಿಕೊಂಡು ಬೀಳು ಹೊಲದಲ್ಲಿ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಯಾವುದೋ ವಸ್ತುವಿನಿಂದ ತಲೆಗೆ ಹೊಡೆದು, ಭಾರಿ ಗಾಯ ಮಾಡಿ ಕೊಲೆ ಮಾಡಿ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬೀಳು ಹೊಲದಲ್ಲಿ ತಂದು ಹಾಕಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.
ಇನ್ನು ಸ್ಥಳೀಯ ಮಾಹಿತಿ ಪ್ರಕಾರ ಕೆಲವು ಯುವಕರು ಯುವತಿಯನ್ನು ನಂಬಿಸಿ ಕರೆದುಕೊಂಡು ಬಂದು ರಾತ್ರಿ ರಾಯಚೂರು ರಸ್ತೆಯಲ್ಲಿರುವ ಜಮೀನಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದು, ಅತ್ಯಾಚಾರ ಮಾಡಿದ ಸ್ಥಳದಲ್ಲಿ ಹುಲ್ಲಿನ ಬಣವೆ ಇದ್ದು, ಮುಂಜಾನೆ ಜಮೀನಿಗೆ ನೀರು ಕಟ್ಟಲು ರೈತರು ಬ್ಯಾಟರಿ ಹಿಡಿದು ಬರವದನ್ನು ನೋಡಿದ ಆರೋಪಿಗಳು ಸಿಕ್ಕಿ ಬಿಳುವ ಭಯದಲ್ಲಿ ಯುವತಿ ಮುಖದ ಮೇಲೆ ಪೆಟ್ರೋಲ್ ಹಾಕಿ ಸುಟ್ಟು, ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
![]() |
![]() |
![]() |
![]() |
![]() |
[ays_poll id=3]