
ರಾಯಚೂರು : ಬಾರದ ಮುಂಗಾರು ಮಳೆಯಿಂದಾಗಿ ಕೃಷ್ಣ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಮುಖವಾಗಿದ್ದು, ಈಗಾಗಲೇ ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರಿನ ಸಮಸ್ಯೆ ತಲೆದೂರಿ ಎಂಟನೇ ಘಟಕ ಸ್ಥಗಿತವಾಗಿದೆ ಎಂದು ಹೇಳಲಾಗುತ್ತಿದ್ದು ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಲಿದಿಯಾ ಎಂಬ ಅನುಮಾನಗಳು ಕಾಡುತ್ತಿವೆ.
ಹೌದು ರಾಜ್ಯಕ್ಕೆ ಶೇಕಡ 60ರಷ್ಟು ವಿದ್ಯುತ್ ರಾಯಚೂರಿನ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ನೀಡಲಾಗುತ್ತದೆ. ಇದೀಗ ಮುಂಗಾರು ಮಳೆಯ ಕೊರತೆಯಿಂದಾಗಿ ಕೃಷ್ಣಾ ನದಿಯಿಂದ ನೀರಿನ ಹರಿವಿನ ಪ್ರಮಾಣ ಇಳಿಮುಖವಾಗಿರುವುದರಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ನೀರಿನ ಕೊರತೆ ಎದುರಾಗಿದೆ. ಆರ್‌ಟಿಪಿಎಸ್ 8 ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಗೆ ತಿಂಗಳಿಗೆ 2.24 ಲಕ್ಷ ಕ್ಯೂಬಿಕ್ ಮೀಟರ್ (100 ಕ್ಯೂಸೆಕ್) ನೀರಿನ ಅಗತ್ಯವಿದೆ. ಕಳೆದ ವರ್ಷ ಗೂಗಲ್ ಬ್ಯಾರೇಜ್‌ನಲ್ಲಿ 344.5 ಮೀಟರ್ ನೀರಿನ ಸಂಗ್ರಹವಾಗಿತ್ತು. ಈ ವರ್ಷ 3 ಅಡಿಗಳಷ್ಟು ಕಡಿಮೆ ನೀರು ಇದೆ. ಸದ್ಯ 341.5 ಮೀಟರ್ ನೀರಿನ ಲಭ್ಯವಿದೆ. ಹೀಗಾಗಿ ಎಚ್ಚರಿಕೆಯಿಂದ ನೀರು ಬಳಸಲಾಗುತ್ತಿದೆ.
ಆರ್‌ಟಿಪಿಎಸ್ 8 ವಿದ್ಯುತ್ ಘಟಕಗಳ ಪೈಕಿ 7 ವಿದ್ಯುತ್ ಘಟಕಗಳಿಂದ ಉತ್ಪಾದನೆ ಆಗುತ್ತಿದೆ. 1,720 ಮೆಗಾವಾಟ್ ಸಾಮರ್ಥ್ಯದ 8 ಘಟಕಗಳಲ್ಲಿ ಈಗ 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಕೃಷ್ಣಾ ನದಿಯಿಂದ ಸರಬರಾಜು ಆಗುವ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ವಿದ್ಯುತ್ ಘಟಕಗಳ ಉತ್ಪಾದನೆಗೆ ನೀರಿನ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಆರ್‌ಟಿಪಿಎಸ್ ಅಧಿಕಾರಿಗಳು ಮತ್ತು ನಾರಾಯಣಪುರ ಡ್ಯಾಂ ಅಧಿಕಾರಿಗಳ ಜತೆಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್‌ಟಿಪಿಎಸ್ ವಿದ್ಯುತ್ ಘಟಕಗಳ ಉತ್ಪಾದನೆಗೆ ತಕ್ಷಣಕ್ಕೆ ನೀರಿನ ಕೊರತೆ ಇಲ್ಲ.
ನಾರಾಯಣಪುರ ಜಲಾಶಯದಲ್ಲಿ ವರ್ಷಕ್ಕೆ ಬೇಕಾದಷ್ಟು ವಿದ್ಯುತ್ ಘಟಕಗಳ ಉತ್ಪಾದನೆಗಾಗಿ ನೀರಿನ ಕೊರತೆ ಆಗದಂತೆ 2.8 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. 8 ವಿದ್ಯುತ್ ಘಟಕಗಳ ಉತ್ಪಾದನೆಗಾಗಿ ಪ್ರತಿ ದಿನಕ್ಕೆ 1.2 ಲಕ್ಷ ಕ್ಯೂಬಿಕ್ ಮೀಟರ್ ನೀರು ಬೇಕು. ಸದ್ಯಕ್ಕೆ ಗುರ್ಜಾಪುರ ಬ್ಯಾರೇಜ್‌ನಲ್ಲಿ ಕೂಡ ನೀರು ಸಂಗ್ರಹ ಮಾಡಲಾಗಿದೆ. ಉತ್ಪಾದನೆಗೆ ನೀರಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎಂ.ದಿವಾಕರ್ ಹೇಳಿದರು.
![]() |
![]() |
![]() |
![]() |
![]() |
[ays_poll id=3]