
ಹಟ್ಟಿ : ಪಟ್ಟಣದ ನಿವಾಸಿಗಳ ನೀರಿನ ಭವಣಿಯನ್ನು ತೀರಿಸಲು ಸರ್ಕಾರ ಮತ್ತು ಹಟ್ಟಿ ಚಿನ್ನದ ಗಣಿ ಸಹಯೋಗದಲ್ಲಿ 18 ಕೋಟಿ ರೂಪಾಯಿ ಖರ್ಚು ಮಾಡಿದರು ಇಲ್ಲಿನ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.
ಹೌದು ಹಟ್ಟಿ ಪಟ್ಟಣದ ಸಮೀಪದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದ್ದರೂ ಪಟ್ಟಣಕ್ಕೆ 6 ತಿಂಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ. ಜನರು ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 2012ರಲ್ಲಿ ಶುದ್ಧ ನೀರಿಗಾಗಿ ನಬಾರ್ಡ್ ಸಹಾಯದಿಂದ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಜಾರಿಗಾಗಿ 14 ಕೋಟಿ ಮಂಜೂರಾಗಿತ್ತು. 4 ಕೋಟಿಯನ್ನು ಹಟ್ಟಿಚಿನ್ನದಗಣಿ ಕಂಪನಿ ಒದಗಿಸಿತ್ತು. ಒಟ್ಟು 18 ಕೋಟಿಯಲ್ಲಿ ಕಾಮಗಾರಿ ಕೈಗೊಳ್ಳಲಾಯಿತು. ಕೋಟಿ ಕೋಟಿ ಹಣ ಕುಡಿಯುವ ನೀರಿಗಾಗಿ ಖರ್ಚು ಮಾಡಿದರೂ ನೀರಿನ ಸಮಸ್ಯೆಯನ್ನು ಬಗೆಹರಿಸುವವರೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳಿನಿಂದ 13ನೇ ವಾರ್ಡ್ ಜನರಿಗೆ ನೀರಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಪ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಹೋರಾಟಗಾರ ನಿಂಗಪ್ಪ ಎಚ್ಚರಿಕೆಯನ್ನು ನೀಡಿದರು.
13ನೇ ವಾರ್ಡ್‌ನಲ್ಲಿ ಹೊಸ ಬೋರ್‌ವೆಲ್ ಕೊರೆಸಲು ಟೆಂಡರ್ ಕರೆಯಲಾಗಿದೆ. ಒಂದು ವಾರದ ಒಳಗೆ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಟಣಮಕಲ್ಲು ಗ್ರಾಮದಿಂದ ನೀರು ಪೂರೈಕೆ ಮಾಡಲು ಮುಂದಾಗಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಶಂಭುಲಿಂಗ ದೇಸಾಯಿ ಹೇಳಿದರು.
![]() |
![]() |
![]() |
![]() |
![]() |
[ays_poll id=3]