This is the title of the web page
This is the title of the web page
Crime News

ಟ್ರಕ್ ಗುದ್ದಿ 25 ಕುರಿಗಳು ಸಾವು : ಚಾಲತ ಪೊಲೀಸರ ವಶ


K2 ಕ್ರೈಂ ನ್ಯೂಸ್ : ಬೆಳ್ಳಂಬೆಳಗ್ಗೆ ರಭಸವಾಗಿ ಟ್ರಕ್ ಗುದ್ದಿದ ಪರಿಣಾಮ, 25 ಕುರಿಗಳು ಮೃತಪಟ್ಟ ಘಟನೆ ಯಾದಗಿರಿ ನಗರದ ಹೊರ ವಲಯದ ಚಿತ್ತಾಪುರ ರಸ್ತೆಯಲ್ಲಿ ಜರುಗಿದೆ.

ಬೆಳಗಿನ ಜಾವ 5 ಗಂಟೆಗೆ ಕುರಿ ಮೇಯಿಸಲು ಕುರಿಗಾಯಿಗಳು, ತಮ್ಮ ಕುರಿಗಳ ಹಿಂಡನ್ನು ಹೊಡೆದುಕೊಂಡು ಹೋಗುತ್ತಿದ್ದ ವೇಳೆ, ಟ್ರಕ್ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಲಾರಿ ಗುದ್ದಿದ ರಭಸಕ್ಕೆ 25 ಕುರಿಗಳು ಮೃತಪಟ್ಟಿವೆ. ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬ ಕುರಿಗಾಯಿಗಳಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು.

 

ಇವರು ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ನಾಗನಟಗಿ ಗ್ರಾಮದ ಕುರಿಗಾಯಿಗಳು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳಕ್ಕೆ ಯಾದಗಿರಿ ಸಂಚಾರಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದು, ಕುರಿಗಳನ್ನು ಗುದ್ದಿರುವ ಟ್ರಕ್ ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


[ays_poll id=3]