
K2 ನ್ಯೂಸ್ ಡೆಸ್ಕ್ : ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಪ್ರಯತ್ನಿಸಿ ಕೆಳಗೆ ಬೀಳುತ್ತಿದ್ದ ವೇಳೆ ಆರ್ಪಿಎಫ್ ಸಿಬ್ಬಂದಿ ಪ್ರಯಾಣಿಗಳನ್ನು ಕಾಪಾಡಿದ ಘಟನೆ ನಡೆದಿದೆ.
ಅಕ್ಟೋಬರ್ 10ರಂದು ಮಂಗಳವಾರ ಹೌರಾ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಹೌರಾ ನಿಲ್ದಾಣದಿಂದ ಹೊರಡುತ್ತಿರುವಾಗ ಘಟನೆ ಸಂಭವಿಸಿದೆ. ಪ್ರಯಾಣಿಕರೊಬ್ಬರು ಹೊರಟಿದ್ದ ರೈಲಿನ ಹಿಂದೆ ಓಡಿ ರೈಲು ವ್ಯವಸ್ಥಾಪಕರ ಕ್ಯಾಬಿನ್ ಮೂಲಕ ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಆಯ ತಪ್ಪಿ ರೈಲು ಹಾಗೂ ಪ್ಲಾಟ್ಫಾರ್ಮ್ ನಡುವೆ ಸಿಲುಕಿಕೊಂಡಿದ್ದರು.
RPF officer at #Howrah station rescued a passenger's life. The passenger was rushing to catch the #VandeBharat train, departed from the platform. Thinking a door was open, collided with it, on the verge of slipping onto the tracks when officer swiftly intervened… pic.twitter.com/Muaofn6UJE
— know the Unknown (@imurpartha) October 10, 2023
ತಕ್ಷಣ ಎಚ್ಚೆತ್ತು ಪ್ರಯಾಣಿಕನ ಹಿಂದೆ ಓಡುತ್ತಿದ್ದ ಆರ್ಪಿಎಫ್ ಸಿಬ್ಬಂದಿ ಅವರತ್ತ ಓಡಿಬಂದು ಅವರನ್ನು ಮೇಲಕ್ಕೆತ್ತಿದ್ದಾರೆ. ಪ್ರಯಾಣಿಕ ಯಾವುದೇ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.
![]() |
![]() |
![]() |
![]() |
![]() |
[ays_poll id=3]