
K2 ಕ್ರೈಂ ನ್ಯೂಸ್ : ಹುಡುಗಿಯರಿಗೆ ಪೋನ್ ಮಾಡಿ ಕಾಡಿಸುತ್ತಿದ್ದ ಕಿಡಿಗೇಡಿಗೆ ಬಿತ್ತು ಭರ್ಜರಿ ಗೂಸಾ, ಮತ್ತೊಬ್ಬರ ಮನೆಯ ಹುಡುಗಿಯರನ್ನು ಚುಡಾಯಿಸುವ ರೋಡ್ ರೋಮಿಯೋ ಗಳು ನೋಡಲೇಬೇಕಾದ ವೀಡಿಯೋ.
ದಾವಣಗೆರೆಯ ಎವಿಕೆ ಕಾಲೇಜ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಫೋನ್ ಮಾಡಿ ಯುವತಿಯರನ್ನು ಪೀಡಿಸುತ್ತಿದ್ದ ಯುವಕನಿಗೆ, ತಕ್ಕ ಶಾಸ್ತಿ ಮಾಡಿದ ಯುವತಿ ಮನೆಯವರು. ತ್ಯಾವಣಗಿ ಗ್ರಾಮದ ವಿನಯ್ ಎನ್ನುವ ರೋಮಿಯೋ ಖಾಸಗಿ ಬಸ್ ಕಂಡಕ್ಟರ್ ಆಗಿದ್ದ. ಮಾಯಕೊಂಡ ಹೋಬಳಿಯ ಗ್ರಾಮವೊಂದರ ಯುವತಿಯರಿಗೆ ಪದೇ ಪದೇ ಪೋನ್ ಮಾಡಿ ಅಸಭ್ಯವಾಗಿ ವರ್ತಿಸಿ ತೊಂದರೆ ಕೊಡುತ್ತಿದ್ದ ವಿನಯ್. ಇದರಿಂದ ರೋಸಿ ಹೋಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ ಯುವತಿಯರು. ಉಪಾಯ ಮಾಡಿ ಎವಿಕೆ ಕಾಲೇಜು ರಸ್ತೆಗೆ ವಿನಯ್ ನನ್ನು ಕರೆಸಿಕೊಂಡ ಯುವತಿ ಕಡೆಯವರು.
ಯುವತಿಯರ ಕಡೆಯವರೂ ತೋಡಿದ ಖೆಡ್ಡಾಗೆ ಉತ್ಸಾಹದಿಂದ ಬಂದು ಬಿದ್ದ ವಿನಯ್. ತಕ್ಷಣ ರೋಡ್ ರೋಮಿಯೋನನ್ನು ಹಿಡಿದು ನಡು ರಸ್ತೆಯಲ್ಲಿ ಚಪ್ಪಲಿ ಸೇವೆ ಮಾಡಿ ಬುದ್ದಿ ಕಲಿಸಿದ್ದಾರೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆರದು ಮನೆಯ ಹುಡುಗಿಯ ಮೇಲೆ ಕಣ್ಣು ರೋಮಿಯೋಗಳಿಗೆ ಇದೊಂದು ಎಚ್ಚರಿಕೆಯಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![]() |
![]() |
![]() |
![]() |
![]() |
[ays_poll id=3]