
K2 ಕ್ರೈಂ ನ್ಯೂಸ್ : ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ವೇಳೆ ಕೋಪಗೊಂಡು, ಪೊಲೀಸ್ ಪೇದೆ ತನ್ನ ನಾಲ್ಕು ತಿಂಗಳ ಮಗುವನ್ನೇ ನೆಲಕ್ಕೆ ಹೊಡೆದು ಕೊಂದು ಹಾಕಿದ ಹೃದಯವಿದ್ರಾವಕ ಘಟನೆ ಚಿಂಚಲಿ ಗ್ರಾಮದಲ್ಲಿ ನಡೆದಿದೆ.
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿದೆ. ಬಸಪ್ಪ ಬಾಳುಬಂಕಿ ಎನ್ನುವ ಪೊಲೀಸ್ ಕಾನ್ಸ್ಟೇಬಲ್ ಚಿಂಚಲಿ ಗ್ರಾಮದ ಲಕ್ಷ್ಮೀ ಎಂಬವರನ್ನು ವಿವಾಹವಾಗಿದ್ದ. ಪತ್ನಿ ಹೆರಿಗೆಗಾಗಿ ತವರಿಗೆ ಬಂದಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಚಿಂಚುಲಿ ಗ್ರಾಮಕ್ಕೆ ಬಂದ ಬಸಪ್ಪ ಮಗುವನ್ನು ಜಾತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ. ಇಷ್ಟು ಚಿಕ್ಕ ಮಗುವನ್ನು ಜಾತ್ರೆಗೆ ಕರೆದೊಯ್ಯುವುದು ಬೇಡವೆಂದು ಪತ್ನಿ ವಾದಿಸಿದ್ದಾಳೆ.
ಪತ್ನಿ ಮಾತು ಕೇಳದೇ ಮಗುವನ್ನು ಬೈಕ್‌ನಲ್ಲಿ ಕರೆದೊಯ್ಯಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ನಾಲ್ಕು ತಿಂಗಳ ಮಗುವನ್ನು ಬೈಕ್‌ನಲ್ಲಿ ಕರೆದೊಯ್ಯುವುದು ಬೇಡ ಎಂದು ತಡೆದಿದ್ದಾಳೆ. ಇಬ್ಬರ ನಡುವೆ ವಾಗ್ವಾದವಾಗಿದೆ, ಈ ವೇಳೆ ಕೋಪಗೊಂಡ ಬಸಪ್ಪ ಮಗುವನ್ನು ಎತ್ತಿ ನೆಲಕ್ಕೆಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆಯ ಬಳಿಕ ಬಸಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಪತ್ನಿ ದೂರು ನೀಡಿದ್ದು, ಕುಡಚಿ ಪೊಲೀಸರು ಬಸಪ್ಪನನ್ನು ಬಂಧಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]