This is the title of the web page
This is the title of the web page
Crime News

ಗುಪ್ತಾಂಗದಲ್ಲಿ ಚಿನ್ನ ಸಾಗಣೆ : ಅಧಿಕಾರಿಗಳೇ ದಂಗು..


K2 ಕ್ರೈಂ ನ್ಯೂಸ್ : ಇತ್ತೀಚೆಗೆ ವಿದೇಶದಿಂದ ಅಕ್ರಮವಾಗಿ ಚಿನ್ನ ಮತ್ತೀತರ ವಸ್ತುಗಳನ್ನು ಸಾಗಿಸುವವರು ಹೆಚ್ಚಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ಪಾರಾಗಲು ನಾನಾ ಐಡಿಯಾಗಳನ್ನು ಹಾಕುತ್ತಾರೆ. ಅಂತೆಯೇ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ‌ ಮೂವರು ಖತರ್ನಾಕ್ ಮಹಿಳೆಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನು ನೋಡಿದ ಅಧಿಕಾರಿಗಳೇ ದಂಗಾಗಿದ್ದಾರೆ.

ಹೌದು ಮೂರು ಪ್ರಕರಣಗಳಲ್ಲಿ 67.57 ಲಕ್ಷ ಮೌಲ್ಯದ 1.13 ಕೆ.ಜಿ ಬಂಗಾರ ವಶಕ್ಕೆ ಪಡೆದ ಘಟನೆ ನಡೆದಿದೆ. ಕೌಲಾಲಂಪುರ ಮತ್ತು ಕುವೈತ್‌ನಿಂದ ಬಂದ ಮೂವರು ಮಹಿಳೆಯರು, ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಕಳ್ಳ ಸಾಗಣೆ ಮಾಡಲು ಬ್ಲೌಸ್, ಗುಪ್ತಾಂಗ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಸಾಗಿಸುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅಧಿಕಾರಿಗಳು ಮಹಿಳೆಯರನ್ನು ಹಿಡಿದಿದ್ದಾರೆ.

ಒಬ್ಬ ಮಹಿಳೆ ಬ್ಲೌಸ್ ಒಳಗಡೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಳು, ಮತ್ತೊಬ್ಬ ಮಹಿಳೆ ಕ್ಯಾಪ್ಸೂಲ್‌ಗಳಲ್ಲಿ ಚಿನ್ನವನ್ನಿಟ್ಟು ಗುಪ್ತಾಂಗದಲ್ಲಿ ಅಡಗಿಸಿಕೊಂಡಿದ್ದಳು. ಅದೇ ರೀತಿ ಇನ್ನೊಬ್ಬ ಮಹಿಳೆ ಚಿಕ್ಕ‌ ಚಿಕ್ಕ ತುಂಡುಗಳಾಗಿ ಗೋಲ್ಡ್ ಬಿಸ್ಕೆಟ್ ಕಟ್ ಮಾಡಿ‌ ಡ್ರೈಫ್ರೂಟ್ಸ್‌ನಲ್ಲಿ ಬೆರೆಸಿಕೊಂಡು ಸಾಗಿಸುತ್ತಿದ್ದಳು. ಇದನ್ನು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ನಂತರ ಎಲ್ಲವನ್ನೂ ಇಂಚಿಂಚೂ ಚೆಕ್ ಮಾಡಿ ವಶಕ್ಕೆ ಪಡೆದಿದ್ದಾರೆ.


[ays_poll id=3]