
K2 ಕ್ರೈಂ ನ್ಯೂಸ್ : ಕಾಣೆಯಾಗಿದ್ದ ಸಹೋದರಿಯರು ಟ್ರಂಕ್ ನೊಳಗೆ ಶವವವಾಗಿ ಪತ್ತೆಯಾದ ಕಾನ್ಪುರ್ ನಲ್ಲಿ ನಡೆದಿದೆ.
ಪಂಜಾಬ್‌ನ ಜಲಂಧರ್ ಜಿಲ್ಲೆಯ ಕಾನ್ಪುರ್‌ನಲ್ಲಿ ಘಟನೆ ನಡೆದಿದೆ. ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಮತ್ತು ಅಮೃತ (9) ಎಂದು ಗುರುತಿಸಲಾಗಿದೆ. ಮಕ್ಕಳ ಪೋಷಕರು ಕೆಲಸಕ್ಕೆ ಹೋಗಿ ಹಿಂದಿರುಗಿದ ವೇಳೆ ಬಾಲಕಿಯರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ್ದಾರೆ. ಇದರಿಂದಾಗಿ ಆತಂಕಗೊಂಡು, ಭಾನುವಾರ ರಾತ್ರಿ ಮಕ್ಸೂದನ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಅದಾದ ಬಳಿಕ ಬಾಲಕಿಯರ ತಂದೆ ಸೋಮವಾರ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಅನ್ನು ತೆಗೆದುಕೊಂಡಿದ್ದಾರೆ. ಆದರೆ ಮಾಮೂಲಿಗಿಂತಲೂ ಟ್ರಂಕ್ ಭಾರವಾಗಿರುವುದನ್ನು ಗಮನಿಸಿ, ಟ್ರಂಕ್ ಅನ್ನು ತೆರೆದಿದ್ದಾರೆ. ಈ ವೇಳೆ ಟ್ರಂಕ್‌ನೊಳಗೆ ನಾಪತ್ತೆಯಾಗಿದ್ದ ಮೂವರು ಹೆಣ್ಣು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೂವರು ಹೆಣ್ಣು ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆ ಮೂವರು ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದರೆ ಈ ವೇಳೆ ಮಕ್ಕಳು ಟ್ರಂಕ್‌ನಲ್ಲಿರುವುದನ್ನು ಗಮನಿಸದೇ ಟ್ರಂಕ್‌ನ ಬೀಗ ಹಾಕಲಾಗಿದೆ. ಈ ವೇಳೆ ಮೂವರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದ್ದು, ಆದರೆ ಟ್ರಂಕ್‌ಗೆ ಬೀಗ ಹಾಕಿದವರು ಯಾರು? ಘಟನೆ ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]