
K2 ನ್ಯೂಸ್ ಡೆಸ್ಕ್ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿರ್ವಾಹಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಸಾರಿಗೆ ಬಸುಗಳಲ್ಲಿ ಉಚಿತ ಪ್ರಯಾಣವಿದ್ದರೂ ID ಕಾರ್ಡ್ ನೋಡಿ ಟಿಕೆಟ್ ನೀಡುವ ಹೊಣೆ ಕಂಡಕ್ಟರ್ ಮೇಲಿದೆ. ಇದರಿಂದ ಸಾಕಷ್ಟು ರೈತರ ಘಟನೆಗಳು ಕೂಡ ಬೆಳಕಿಗೆ ಬರುತ್ತೇವೆ. ವಿನಾಕಾರಣ ನಿರ್ವಾಹಕದ ಮೇಲೆ ಹಲ್ಲೆ ಘಟನೆಗಳು ಕೂಡ ಬೆಳಕಿಗೆ ಬಂದಿವೆ. ನಿರ್ವಾಹಕರ ಮೇಲಿನ ಈ ಭಾರವನ್ನು ತಪ್ಪಿಸಲು ಸರ್ಕಾರ ಹೊಸ ಯೋಜನೆ ರೂಪಿಸಿಕೊಂಡಿದ್ದು.
ಟ್ಯಾಪ್ & ಟ್ರಾವೆಲ್ ತಂತ್ರಜ್ಞಾನವುಳ್ಳ ಸ್ಮಾರ್ಟ್ ಕಾರ್ಡ್ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ವರದಿಯಾಗಿದೆ. ಇನ್ನು ಈ ಒಂದು ಸ್ಮಾರ್ಟ್ ಕಾರ್ಡ್ ಬಂದಿದ್ದೆ ಆದರೆ ನಿರ್ವಾಹಕನ ಜವಾಬ್ದಾರಿ ಭಾಗಶಃ ಕಡಿಮೆಯಾಗಲಿದೆ. ಪ್ರತಿ ಕಾರ್ಡ್‌ಗೆ 20 ರಿಂದ 30 ರೂಪಾಯಿ ವೆಚ್ಚವಾಗಲಿದೆ. ಈ ಬಗ್ಗೆಯೂ ಕೂಡ ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
![]() |
![]() |
![]() |
![]() |
![]() |
[ays_poll id=3]