This is the title of the web page
This is the title of the web page
Crime NewsNational News

ಬಾಲಕಿ ಶವದೊಂದಿಗೆ ಲೈಂಗಿಕ ಕ್ರಿಯೆ: ಥೂ ಇವರೆಂಥ ಕಾಮುಕರು..!


K2 ನ್ಯೂಸ್ ಡೆಸ್ಕ್ : ಅಪ್ರಾಪ್ತ ಬಾಲಕಿಯನ್ನುಕೊಂದು ಬಳಿಕ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಹೀನ ಕೃತ್ಯ ನಡೆದಿದ್ದು, ರೈಲ್ವೆ ಉದ್ಯೋಗಿ ಸೇರಿದಂತೆ ಮೂರು ಆರೋಪಿಗಳನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕರೀಂಗಂಜ್ ಟೌನ್ ಬೈಪಾಸ್ ಬಳಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು, ಅದೇ ದಿನ ಆಕೆಯನ್ನು ಕೊಲೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯನ್ನು ಕೊಂದು ಬಳಿಕ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧ ಹಾಗೂ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕರೀಮ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ಸುದ್ದಿಗಾರರಿಗೆ ತಿಳಿಸಿದ್ದು, ಬಾಲಕಿಯ ವೈಯಕ್ತಿಕ ಡೈರಿಯಲ್ಲಿ ಪತ್ತೆಯಾದ ಫೋನ್ ನಂಬರ್ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಕರೀಮ್‌ಗಂಜ್ ಪಟ್ಟಣದ ಅವರ ಮನೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ.

ಹೊಸದಾಗಿ ನೇಮಕಗೊಂಡ ರೈಲ್ವೇ ಉದ್ಯೋಗಿಯೊಬ್ಬ ಈ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ. ಅವನೊಂದಿಗೆ ದೈಹಿಕ ಸಂಬಂಧ ನಡೆಸುವಂತೆ ಆತ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಆದರೆ ಅವಳು ಅದನ್ನು ಪದೇ ಪದೇ ತಿರಸ್ಕರಿಸಿದ್ದಳು. ಸೆಪ್ಟೆಂಬರ್ 9 ರಂದು ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಆತ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಆದರೆ ಆಕೆ ವಿರೋಧಿಸಿದಾಗ ಅವರು ಅವಳನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ ಮತ್ತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಬಳಿಕ ಆಕೆಯ ಶವವನ್ನು ಬೈಪಾಸ್ ಪಕ್ಕದಲ್ಲಿ ಎಸೆದಿದ್ದು, ಅಲ್ಲಿ ಆಕೆಯ ಪೋಷಕರು ಗುರುತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.


[ays_poll id=3]