
ರಾಯಚೂರು : ಪಾಲಕರೆ ನಿಮ್ಮ ಮಕ್ಕಳಿಗೆ ಚಾಕಲೇಟ್ ಕೊಡಿಸುವ ಮುನ್ನ, ಚಾಕೊಲೇಟ್ ಕಡೆ ಗಮನ ಇರಲಿ. ನೀವೂ ಸ್ವಲ್ಪ ಯಾಮಾರಿದ್ರೆ ನಿಮ್ಮ ಮಕ್ಕಳು ತಿನ್ನಬಹುದು ಗಾಂಜಾ ಚಾಕೊಲೇಟ್. ರಾಯಚೂರಿನ ಮನೆಯಲ್ಲಿ ಮಾರಾಟವಾಗುತ್ತಿವೆ ಚಾಕೊಲೇಟ್ ಗಾಂಜಾ.
ರಾಯಚೂರಿನ ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ಗಾಂಜಾ ಚಾಕೊಲೇಟ್ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. 6 ಗ್ರಾಂ. ತೂಕದ ಗಾಂಜಾ ಚಾಕೊಲೇಟ್ ಅಂಗಡಿಗಳಲ್ಲಿ ಈ ವೇಳೆ 30,50,100ರೂ. ಗೆ ಗಾಂಜಾ ಚಾಕೊಲೇಟ್ ಮಾರಾಟ ಮಾಡಲಾಗುತ್ತಿದೆ. ಉತ್ತರಪ್ರದೇಶದಲ್ಲಿ ತಯಾರಿಸಿದ ಗಾಂಜಾ ಚಾಕೊಲೇಟ್ ರಾಯಚೂರಿನ ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾ ಸೇರಿದಂತೆ ಹಲವು ಕಡೆ ಗಾಂಜಾ ಚಾಕೊಲೇಟ್ ಮಾರಾಟ ಮಾಡಲಾಗುತ್ತಿದೆ.
ಹಲವು ದಿನಗಳಿಂದ ರಾಜಾರೋಷವಾಗಿ ಈ ಒಂದು ಗಾಂಜಾ ಮಿಶ್ರಿತ ಚಾಕಲೇಟ್ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಶ್ರೀಪಾನಾ ಮುನಾಕಾ, ಶ್ರೀ ಆನಂದ ಮುನಾಕಾ ಚಾಕೊಲೇಟ್ ಪತ್ತೆಯಾಗಿದೆ. ಒಟ್ಟು 482 ಗಾಂಜಾ ಚಾಕೊಲೇಟ್ ಜಪ್ತಿ ಮಾಡಲಾಗಿದ್ದು. ರಾಚಯ್ಯ ಸ್ವಾಮಿ, ಅಂಬರಯ್ಯ ಎಂಬ ಆರೋಪಿಗಳ ಬಂಧಿಸಲಾಗಿದ್ದು, ಕಿಂಗ್ ಪಿನ್ ಗಾಗಿ ಬಂದಿದ್ದರಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಬಕಾರಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]