This is the title of the web page
This is the title of the web page
Crime NewsState News

ತಂದೆಯಿಂದಲೇ ಬುದ್ಧಿಮಾಂದ್ಯ ಮಗಳ ನಿತಂತರ ಅತ್ಯಾಚಾರ..!


K2kannadanews.in

Crime News : ಹೆತ್ತ ತಂದೆಯೇ ತನ್ನ ಬುದ್ಧಿಮಾಂದ್ಯ ಮಗಳ (Mentally retarded daughter) ಮೇಲೆಯೇ ನಿರಂತರ ಅತ್ಯಾಚಾರ (Rape by father) ಮಾಡಿ ಆಕೆಯ ಮಗುವಿಗೂ ತಂದೆಯಾಗಿರುವ ಅಮಾನವೀಯ ಘಟನೆ ನಡೆದಿದೆ. ಪೊಲೀಸರು ತಂದೆಯನ್ನು (Father Arrested) ಬಂಧಿಸಿದ್ದಾರೆ. ವಿಪರ್ಯಾಸ ಎಂದರೇ ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕವಷ್ಟೇ ಈ ಭಯಾನಕ ಘಟನೆ (Physical Harassment) ಬೆಳಕಿಗೆ ಬಂದಿದೆ.

ಬೆಳಗಾವಿಯಲ್ಲಿ ಘಟನೆ ನಡೆದಿದ್ದು ಬುದ್ಧಿಮಾಂದ್ಯ ಯುವತಿಯ ತಾಯಿ (Mother)ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು (Died). ಹಾಗಾಗಿ ಮನೆಯಲ್ಲಿ ತಂದೆ ಮತ್ತು ಈ ಮಗಳು ಮಾತ್ರ ವಾಸಿಸುತ್ತಿದ್ದರು (Living). ತಂದೆ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಪಾಪಿ ಅಪ್ಪ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ್ದ. ಯಾರೂ ಇಲ್ಲದ, ಏನೆಂದು ಅರ್ಥ ಮಾಡಿಕೊಳ್ಳಲಾಗದ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ ಮಾಡಿದ್ದಾನೆ.

ಈ ನಡುವೆ, ಸಂತ್ರಸ್ತ ಯುವತಿಯ ಹೊಟ್ಟೆ ದೊಡ್ಡದಾಗುತ್ತಿರುವುದು ಕೆಲವರ ಗಮನಕ್ಕೆ (for time) ಬಂದಿತ್ತು. ಅವರು ಆಶಾ (Asha) ಕಾರ್ಯಕರ್ತೆಯರಿಗೆ ವಿಷಯ ತಿಳಿಸಿದರು. ಸಂತ್ರಸ್ತೆ ಗರ್ಭಿಣಿ (pregnant) ಎಂದು ಆಶಾ ಕಾರ್ಯಕರ್ತೆಯರು ಖಚಿತಪಡಿಸಿದಾಗ, ಪೊಲೀಸರಿಗೆ ದೂರು (Police complent) ನೀಡಲಾಗಿದೆ. ಎನ್‌ಜಿಒ (NGO) ದೂರಿನ ಮೇರೆಗೆ ತನಿಖೆ ನಡೆಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಎಸ್‌ಎಸ್ ಸಿದ್ದರಾಮಪ್ಪ ತಿಳಿಸಿದ್ದಾರೆ. ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಹೇಳಿದರು.


[ays_poll id=3]