
ರಾಯಚೂರು : ಪತ್ರಿಕೋದ್ಯಮ ಇಂದು ಉದ್ಯಮವಾಗಿ ಬದಲಾಗಿರುವುದರಿಂದ ನಿಷ್ಠಾವಂತ ಪತ್ರಕರ್ತರು ಸತ್ಯಾಂಶ ಬಯಲಿಗೆಳೆಯುವಲ್ಲಿ ಅಸಹಾಯಕರಾಗಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜ್ ಆತಂಕ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ರಿಪೋರ್ಟ್ ಗಿಲ್ಡ್ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕ ಪತ್ರಕರ್ತರು ಸಮಸ್ಯೆಗಳನ್ನು ಬಯಲಿಗೆಳೆಯುವಲ್ಲಿ ಶ್ರಮಿಸುತ್ತಿದ್ದಾರೆ. ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪತ್ರಿಕೋದ್ಯಮ ಉದ್ಯಮವಾಗಿ ಬದಲಾಗಿರುವುದು ಅವರ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ಅನೇಕ ಪತ್ರಕರ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಜಿಲ್ಲೆಯ ಸಮಸ್ಯೆಗಳ ಕುರಿತಂತೆ ಅವರೊಡನೆ ಚರ್ಚಿಸಿದ್ದೇನೆ. ಸಮಸ್ಯೆಗಳ ಪರಿಹಾರಕ್ಕಾಗಿ ಪತ್ರಕರ್ತರ ಶ್ರಮಕ್ಕೆ ನಾನು ಸಹಕರಿಸಿದ್ದೇನೆ ಎಂದ ಅವರು ಸಾವಿರಾರು ಸಂಖ್ಯೆಯಲ್ಲಿ ಪತ್ರಿಕೆಗಳು ದೃಶ್ಯ ಮಾಧ್ಯಮಗಳು ಕರ್ತವ್ಯ ನಿರ್ವಹಿಸುತ್ತೀವೆ. ಆದರೆ ಕೆಲ ಮುದ್ರಣ ಮಾಧ್ಯಮಗಳು ಸಂಕಷ್ಟದಲ್ಲಿಯೂ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ ಎಂದ ಅವರು ಪತ್ರಕರ್ತರ ಬಸ್ ಪಾಸ್, ನಿವೇಶನ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತಂತೆ ಸರ್ಕಾರದ ಗಮನಸೆಳೆದು ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
![]() |
![]() |
![]() |
![]() |
![]() |
[ays_poll id=3]