
ರಾಯಚೂರು : ರಾಜ್ಯ ಸರ್ಕಾರದಿಂದ ಗುತ್ತಿಗೆ ಪಡೆದ ಕಾಮಗಾರಿಗಳನ್ನು ಪೂರ್ಣವಾಗಿ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ಕಾಮಗಾರಿಯನ್ನು ಮುಗಿಸಿದ್ದು ಬಾಕಿ ಹಣವನ್ನು ಸರ್ಕಾರ ಪಾವಯತಿಸುತ್ತಿಲ್ಲ. ಸರ್ಕಾರದ ವಿಳಂಬ ನೀತಿಯಿಂದ ರಾಜ್ಯದಲ್ಲಿ ಈಗಾಗಲೇ ಓರ್ವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಯಚೂರು ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನಾಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳಿಂದ ಸುಮಾರು 500 ರಿಂದ 600 ಕೊಟಿ ರೂಪಾಯಿಗಳ ವರೆಗೆ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಬೇಕಾಗಿದೆ. ಇಂತಹ ಸಂಕಷ್ಟದಲ್ಲಿ ಗುತ್ತಿಗೆದಾರರು ಅನೇಕ ಕಡೆ ಸಾಲಗಳನ್ನು ಪಡೆದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಇವರ ದುರಹಂಕಾರ ಹೇಳಕೆಯಿಂದ ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ನೋವು ಉಂಟಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ನಮ್ಮ ಗುತ್ತಿಗೆದಾರರಲ್ಲಿ ಒಬ್ಬರಾದ ಗೌತಮ್ ಇವರು ಮಾಡಿದ ಕಾಮಗಾರಿಯ ಬಾಕಿ ಹಣ ಪಾವತಿಯಾಗದ ಕಾರಣಕ್ಕೆ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನೀರಿಗೆ ಮತ್ತು ಅವರ ಕುಟುಂಬಕ್ಕೆ ಹೋಣಿಗಾರರು ಯಾರು? ಸರ್ಕಾರದ ವಿಳಂಭ ಧೋರಣೆಯಿಂದ ಇನ್ನೂ ಅನೇಕ ಗುತ್ತಿಗೆದಾರರು ಗೌತಮ್ ಅವರ ಹಾದೀಯನ್ನೆ ತುಳಿಯಲು ಸಜ್ಜಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರಣ ಮಾನ್ಯ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿ ತಕ್ಷಣವೇ ಗುತ್ತಿಗೆದಾರರ ಕುಂದು- ಕೋರತೆಗಳನ್ನು ನೀವಾರಿಸಿ ಮತ್ತು ಬಾಕಿ ಹಣವನ್ನು ಪಾವತಿಸಿಬೇಕೆಂದು ಕೋರುತ್ತೇವೆ. ವಿಳಂಭವಾದರೆ ಸಂಭಂದ ಪಟ್ಟ ಇಲಾಖೆಗಳ ಮುಂದೆ ಧರಣಿ ಕೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
![]() |
![]() |
![]() |
![]() |
![]() |
[ays_poll id=3]