This is the title of the web page
This is the title of the web page
Crime NewsNational News

ಸ್ಯಾನಿಟರಿ ಪ್ಯಾಡ್ ಲ್ಲಿ ಕೊಕೇನ್ ಸಾಗಾಟ : ಮಹಿಳೆಯರ ಬಂಧನ


K2 ಕ್ರೈಂ ನ್ಯೂಸ್ : ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಕೇನ್ ಅಕ್ರಮ ಸಾಗಾಟ ಹೆಚ್ಚಾಗಿದೆ. ವಿಮಾನ ನಿಲ್ದಾಣಗಳಲ್ಲಿ ಬುದ್ಧಿವಂತಿಕೆಯಿಂದ ಸಾಧಿಸಲು ಎಲ್ಲಿಲ್ಲದ ಐಡಿಯಾಗಳನ್ನು ಕಂಡುಹಿಡಿಯುತ್ತಾರೆ. ಅಂತಹ ಐಡಿಯಾ ಬಳಸಿ ಅಕ್ರಮವಾಗಿ ಕೊಕೇನ್ ಸಾಗಾಟ ಮಾಡಲು ಹೋಗಿ, ಮೂವರು ಮಹಿಳೆಯರು ಸಿಕ್ಕಿ ಬಿದ್ದ ಘಟನೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸ್ಯಾನಿಟರಿ ಪ್ಯಾಡ್ ಗಳಲ್ಲಿ ನಿಷೇಧಿತ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡುತ್ತಿರುವುದಾಗಿ, ಗುಪ್ತಚರ ವರದಿಯ ಆಧಾರದ ಮೇಲೆ ಕಳೆದ ಮೂರು ದಿನಗಳಿಂದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಕಾರ್ಯಾಚರಣೆ ನಡೆಸುತ್ತಿತ್ತು. ಮಾಹಿತಿಯಂತೆ ಸುಮಾರು 5.68 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ತುಂಬಿಕೊಂಡು ಬರುತ್ತಿದ್ದ ಮೂವರು ಆಫ್ರಿಕನ್ ಮಹಿಳೆಯರನ್ನು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ತನಿಖೆಯ ವೇಳೆ ಮೂವರು ವಿದೇಶಿ ಮಹಿಳಾ ಪ್ರಯಾಣಿಕರನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಸಿಬ್ಬಂದಿ ಬಂಧಿಸಿದ್ದಾರೆ. ಇವರಿಂದ ಒಟ್ಟು 568 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ವಿದೇಶಿ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಮತ್ತು ಗುದನಾಳದ ಒಳಗೆ ಕೊಕೇನ್ ಅನ್ನು ಇರಿಸಿ ತರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


[ays_poll id=3]