K2kannadanews.in
Health Tip : ಜೀವನಶೈಲಿ (Life style) ಬದಲಾವಣೆ ಮತ್ತು ಸರಿಯಾದ ಆಹಾರ (good food) ಪದ್ಧತಿಯಿಂದ ಈ ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ನಮ್ಮ ಹೃದಯ ಆರೋಗ್ಯದ (Heart health) ಬಗ್ಗೆ ಮಾತನಾಡೋದಾದ್ರೆ, ಕಾಫಿ (coffee) ಮತ್ತು ಗ್ರೀನ್ ಟೀ (Green tea) ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದ್ರೆ ಎರಡರಲ್ಲಿ ಯಾವುದು ಉತ್ತಮ. ನೋಡೋಣ ಬನ್ನಿ.
ಕೆಲ ಅಧ್ಯಯನದ (Steady) ಪ್ರಕಾರ ಕಾಫಿಯಲ್ಲಿ ಸುಮಾರು 95 ರಿಂದ 200 ಮಿಗ್ರಾಂ ಕೆಫೀನ್ (Caffeine) ಇರುತ್ತದೆ, ಗ್ರೀನ್ ಟೀ 35 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ ಎಂದು ಸಂಶೋಧಕರು (Research) ಕಂಡುಕೊಂಡಿದ್ದಾರೆ. ಅಂದರೆ ಗ್ರೀನ್ ಟೀ ಗಿಂತ ಕಾಫಿಯಲ್ಲಿ ದುಪ್ಪಟ್ಟು ಕೆಫೀನ್ ಇರುತ್ತದೆ. ಹಾಗಾಗಿ ಅಧಿಕ ಬಿಪಿ (BP) ಸಮಸ್ಯೆ ಇರುವವರಿಗೆ ಕಾಫಿ ಕುಡಿಯುವುದು ಹಾನಿಕಾರಕ. ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಂಶೋಧನೆಯ ಪ್ರಕಾರ, ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್ ಎಂಬ ಅಂಶವು ಕೆಫೀನ್‌ನ ಹಾನಿಕಾರಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ತೂಕ ನಷ್ಟಕ್ಕೆ ಇದು ಉಪಯುಕ್ತ, ಗ್ರೀನ್ ಟೀ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಅಂಶವು ವಯಸ್ಸಾಗುವುದರ ವಿರೋಧಿ ಅಂಶವಾಗಿ ಹೊರಹೊಮ್ಮುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಕಾಫಿ ಸಹಾಯ ಮಾಡುತ್ತದೆ. ಕಾಫಿ ಹೃದಯಕ್ಕೂ ಒಳ್ಳೆಯದು. ಆದರೆ ಅಧಿಕ ರಕ್ತದೊತ್ತಡ ಇರುವವರು ಹೆಚ್ಚು ಕಾಫಿ ಕುಡಿಯಬಾರದು.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.