ತೂಕ ಹೆಚ್ಚಾಗಿದೆಯಾ, ಮಧುಮೇಹ ತಡೆಯಲು ಮೆಂತೆ ಹೀಗೆ ಬಳಸಿ..!

K 2 Kannada News
ತೂಕ ಹೆಚ್ಚಾಗಿದೆಯಾ, ಮಧುಮೇಹ ತಡೆಯಲು ಮೆಂತೆ ಹೀಗೆ ಬಳಸಿ..!
Oplus_131072
WhatsApp Group Join Now
Telegram Group Join Now

K2kannadanews.in

Health tips menthol : ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಲ್ಲಿ (work preshar), ತೂಕ ಹೆಚ್ಚುವಿಕೆ (weigh gain) ಮತ್ತು ಮಧುಮೇಹ (Sugar) ಸಾಮಾನ್ಯವಾಗಿದೆ. ಮನೆಯಲ್ಲಿಯೇ (home) ಇರುವ ಕೆಲವು ವಸ್ತುಗಳನ್ನು ಸರಿಯಾದ ಮಾರ್ಗದಿಂದ (Proper way) ಸೇವನೆ ಮಾಡುವ ಮೂಲಕ ಖಂಡಿತವಾಗಿಯೂ ತೂಕ ಇಳಿಕೆ (Wight loss) ಮಾಡಿಕೊಳ್ಳಲು ಸಾಧ್ಯವಿದೆ. ನೋಡಲು ಒಂದು ಸಣ್ಣ ಕಾಳಾದರೂ ಸಹ ಮೆಂತೆಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು (Health benefit’s) ಹೊಂದಿದೆ. ಮೆಂತೆಕಾಳುಗಳನ್ನು ದಿನನಿತ್ಯ ಸೇವನೆ ಮಾಡುವ ಮೂಲಕ ತೂಕ ಇಳಿಕೆ ಮಾಡಿಕೊಳ್ಳಲು ಸಾಧ್ಯವಿದೆ.

ಮೆಂತೆಯನ್ನು ನೇರವಾಗಿ ಸೇವಿಸುವುದು ತುಸು ಕಷ್ಟದ ಕೆಲಸ. ಆದರೆ ಇದನ್ನು ನೀವು ಬೇರೆ ಬೇರೆ ವಿಧಾನಗಳಲ್ಲಿ ಖಂಡಿತವಾಗಿಯೂ ಸೇವನೆ ಮಾಡಬಹುದಾಗಿದೆ. ಬೆಳಗ್ಗೆ ತಿಂಡಿಗೆ ಮೆಂತೆ ದೋಸೆಯನ್ನು ಮಾಡಬಹುದು. ಅಂದರೆ ಅಕ್ಕಿಯ ಜೊತೆಯಲ್ಲಿ ಮೆಂತೆಯನ್ನೂ ನೆನೆಸಿ ದೋಸೆ ಹಿಟ್ಟು ತಯಾರಿಸಿ ನೀವು ದೋಸೆ ತಿನ್ನಬಹುದು. ಇನ್ನು ಸಾಂಬಾರುಗಳಲ್ಲಿಯೂ ಮೆಂತೆ ಬಳಕೆ ಆಗುತ್ತದೆ. ಈ ಮಾರ್ಗದ ಮೂಲಕ ನೀವು ಮೆಂತೆ ಸೇವನೆ ಮಾಡಬಹುದಾಗಿದೆ.

ಮೆಂತೆಯನ್ನು ನೇರವಾಗಿ ಸೇವಿಸುವ ವಿಧಾನವಿದು. ರಾತ್ರಿ ಮೆಂತೆಯನ್ನು ನೆನೆಸಿಟ್ಟು ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೇಸ್ಟ್​ ಮಾಡಿ, ಇದಕ್ಕೆ ಮೊಸರು ಹಾಗೂ ಉಪ್ಪನ್ನು ಸೇರಿಸಿ ನೀವು ಇದನ್ನು ಸೇವನೆ ಮಾಡಬಹುದಾಗಿದೆ. ಹಾಗೆಯೇ ನೇರವಾಗಿ ತಿನ್ನಲು ಸಾಧ್ಯವಿಲ್ಲ ಎಂದಾದರೆ ಬೆಳಗ್ಗೆ ದೋಸೆ ಅಥವಾ ಇಡ್ಲಿಯ ಜೊತೆಯಲ್ಲಿ ಚಟ್ನಿಯ ರೂಪದಲ್ಲಿ ಸೇವಿಸಬಹುದು.

ತೂಕ ಇಳಿಕೆ ಮಾಡುವ ಪ್ರಯತ್ನದಲ್ಲಿ ನೀವಿದ್ದರೇ, ರಾತ್ರಿ 1 ರಿಂದ 2 ಚಮಚ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಎದ್ದು ಮೆಂತೆ ಕಾಳುಗಳನ್ನು ಸೋಸಿಕೊಂಡು ನೀರನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದು ನಿಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಸರಿದೂಗಿಸುವ ಜೊತೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವುದು.

ಆರ್ಯುವೇದದ ಅಡಿಯಲ್ಲಿ ಸಾಕಷ್ಟು ಮಹತ್ವವನ್ನು ಹೊಂದಿದೆ ಮೆಂತೆ. ಯಕೃತ್ತಿನ ಆರೋಗ್ಯ, ಹೃದಯದ ಆರೋಗ್ಯ, ಮಧುಮೇಹಿಗಳ ಆರೋಗ್ಯ, ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರ ಆರೋಗ್ಯ ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕರಿಗೆ ಮೆಂತೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಇವುಗಳಲ್ಲಿ ಆಂಟಿ ಆಕ್ಸಿಡಂಟ್​ ಗುಣಗಳು ಇರುವುದರಿಂದ ಕೇವಲ ಈ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರವಲ್ಲದೇ ಯಾರು ಬೇಕಿದ್ದರೂ ಇದನ್ನು ಸೇವಿಸಿದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಂತೂ ನಿಜ.

WhatsApp Group Join Now
Telegram Group Join Now
Share This Article