K2kannadanews.in
Health tips ಆರೋಗ್ಯ ಭಾಗ್ಯ : ಕಂಪ್ಯೂಟರ್ ಯುಗದಲ್ಲಿ ಕೆಲಸದ ಒತ್ತಡದಲ್ಲಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುವುದಿಲ್ಲ. ಕೆಲವರು ತಿನ್ನುವುದು ಕಡಿಮೆಯಾದರೂ ತೂಕ ಹೆಚ್ಚುತ್ತಿರಯತ್ತಾರೆ. ಅದಕ್ಕೆ ನೀವುಗಳು ರಾತ್ರಿ ವೇಳೆ ಮಾಡುವ ಸಣ್ಣ ತಪ್ಪುಗಳೆ ಕಾರಣ.
ವಿಶೇಷವಾಗಿ ರಾತ್ರಿಯಲ್ಲಿ ನೀವು ಮಾಡುವ ತಪ್ಪುಗಳಿಂದಾಗಿ, ಹೆಚ್ಚು ತೂಕವನ್ನು ಪಡೆಯುತ್ತೀರಿ. ಆ ತಪ್ಪುಗಳೇನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ತಿಳಿದುಕೊಂಡ ಬಳಿಕ ಅವುಗಳನ್ನು ತಪ್ಪಿಸುವುದರಿಂದ ನೀವು ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು.
ಮಲಗುವ 6 ಗಂಟೆಗಳ ಮೊದಲು ಕಾಫಿ ಕುಡಿಯುವುದನ್ನು ತಪ್ಪಿಸಿ. ಕಾಫಿಯಲ್ಲಿರುವ ಕ್ಲೋರೊಜೆನಿಕ್ ಆಮ್ಲವು ತೂಕವನ್ನು ಹೆಚ್ಚಿಸಬಹುದು. ಅದರಲ್ಲೂ ರಾತ್ರಿ ಕಾಫಿ ಕುಡಿದರೆ ತೂಕ ಖಂಡಿತ ಹೆಚ್ಚುತ್ತದೆ. ಕಾಫಿಯ ಬದಲು ಹರ್ಬಲ್ ಟೀ ಕುಡಿದರೆ ತೂಕ ಇಳಿಸಿಕೊಳ್ಳಬಹುದು. ರಾತ್ರಿ ವೇಳೆ ಹೆಚ್ಚಿನ ಮಂದಿ ಊಟದ ಮೊದಲು ಮತ್ತು ನಂತರ ಕುರುಕಲು ತಿನಿಸುಗಳನ್ನು ತಿನ್ನುತ್ತಾರೆ. ವಾಸ್ತವವಾಗಿ ಈ ತಿಂಡಿಗಳನ್ನು ಸಂಜೆ 6 ಗಂಟೆಗೂ ಮೊದಲೇ ತಿನ್ನಬೇಕು. 6 ಗಂಟೆಯ ನಂತರ ಯಾವುದೇ ಕಾರಣಕ್ಕೂ ತಿಂಡಿ ಅಥವಾ ಜಂಕ್ ಫುಡ್ ತಿನ್ನಬೇಡಿ. ಒಂದು ವೇಳೆ ತಿಂದರೆ ನಿಮ್ಮ ತೂಕ ಸಹಜವಾಗಿಯೇ ಹೆಚ್ಚಾಗುತ್ತದೆ. ಯಾರೂ ಕೂಡ ಈ ತಪ್ಪು ಮಾಡಬಾರದು.
ಪ್ರತಿಯೊಬ್ಬರೂ ನಿಯಮಿತವಾಗಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ನಿದ್ರೆ ಸರಿಯಾಗಿಲ್ಲದಿದ್ದರೂ ತೂಕ ಹೆಚ್ಚಾಗುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಆದ್ದರಿಂದ ಪ್ರತಿಯೊಬ್ಬರಿಗೂ ಅಗತ್ಯಕ್ಕೆ ತಕ್ಕಷ್ಟು ನಿದ್ರೆ ಅವಶ್ಯಕ. ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ನಿಯಮಿತವಾಗಿ ವಾಕಿಂಗ್ ಮಾಡಬೇಕು. ಇದರಿಂದ ತೂಕ ಬಹಳಷ್ಟು ಕಡಿಮೆಯಾಗುತ್ತದೆ. ನೀವು ವ್ಯಾಯಾಮ ಮಾಡದಿದ್ದರೆ ಸಹಜವಾಗಿಯೇ ತೂಕ ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವ್ಯಾಯಾಮ ಮಾಡಿದರೆ ರಾತ್ರಿ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.
ರಾತ್ರಿ ವೇಳೆ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಬಳಕೆ ಕಡಿಮೆ ಮಾಡಬೇಕು. ಬೆಳಿಗ್ಗೆ ತನಕ ಟಿವಿ ನೋಡಬಾರದು. ಒಂದು ವೇಳೆ ನೋಡಿದರೆ ನಿದ್ರಾಹೀನತೆಯ ಸಮಸ್ಯೆ ಕಾಡುತ್ತದೆ. ಇದರಿಂದ ತೂಕವೂ ಸಹ ಹೆಚ್ಚಾಗುತ್ತದೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು. ಹಾಗೆಯೇ ಮಲಗುವ ಕೋಣೆಯಲ್ಲಿ ನೀಲಿ ಬಣ್ಣದ ಲೈಟ್ ಬಳಸಿದರೆ ಬೇಗ ನಿದ್ದೆ ಬರುತ್ತದೆ. ಇದರೊಂದಿಗೆ ನೀವು ಸಮಯಕ್ಕೆ ಮಲಗಬಹುದು. ಈ ರೀತಿ ಮಾಡುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.