K2kannadanews.in
scientific reason : ಆಷಾಢ ಕಳೆದು ಶ್ರಾವಣ ಮಾಸ ಬಂದಿದೆ. ಈ ಮಾಸದಲ್ಲಿ ನಾನ್ ವೆಜ್ ತಿನ್ನಬಾರದು ಎನ್ನುತ್ತಾರೆ. ಯಾಕೆ ತಿನ್ನಬಾರದು ಎಂಬ ಪ್ರಶ್ನೆ ಕಾಡುತ್ತದೆ. ಅನೇಕರು ದೇವರ ಹೆಸರಿನಲ್ಲಿ ಮಾಂಸಾಹಾರ ತ್ಯಜಿಸಿ ದೇವರ ಉಪಾಸನೆಯಲ್ಲಿ ತೊಡಗುತ್ತಾರೆ. ಇದು ಧಾರ್ಮಿಕ ಶ್ರದ್ಧೆಯಾದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಎನ್ನುವವರಿದ್ದಾರೆ.
ಈ ತಿಂಗಳಲ್ಲಿ ಮಳೆಯಾಗುತ್ತದೆ. ಪರಿಸರದಲ್ಲಿ ಶಿಲೀಂಧ್ರಗಳು ಮತ್ತು ವೈರಸ್‌ಗಳ ಸೋಂಕು ಹೆಚ್ಚಾಗುತ್ತದೆ. ಆಹಾರವು ಬೇಗನೆ ಹಾಳಾಗುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದಾಗಿ ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮವಾಗಿದೆ. ಮಳೆಗಾಲದಲ್ಲಿ ನೀರು ಕಲುಷಿತವಾಗುವುದರಿಂದ, ಈ ಸಮಯದಲ್ಲಿ ಮೀನು ಇತ್ಯಾದಿ ಮಾಂಸಾಹಾರ ಯೋಗ್ಯ ಜೀವಿಗಳು ರೋಗ ಹರಡುವ ಲಕ್ಷಣಗಳನ್ನು ಹೊಂದಿರುತ್ತದೆ. ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರ ಸೇವನೆ ಅಷ್ಟು ಒಳ್ಳೆಯದಲ್ಲ ಎನ್ನುವುದು ವೈಜ್ಞಾನಿಕವಾಗಿ ನೀಡಲಾಗುವ ಕಾರಣವಾಗಿದೆ.
ಇದರ ಜೊತೆಗೆ ಧಾರ್ಮಿಕವಾಗಿಯೂ ಈ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ. ಯಾಕೆಂದರೆ ಶ್ರಾವಣ ಮಾಸ ಹಲವು ದೇವರುಗಳ ಹಬ್ಬಗಳ ಮಾಸ. ದೇವರ ಆರಾಧನೆಯ ನಡುವೆ ಮಾಂಸಾಹಾರ ಮಾಡದೇ ಸಾತ್ವಿಕ ಆಹಾರ ಮಾಡುವುದು ಒಳ್ಳೆಯದು ಎಂಬ ಕಾರಣಕ್ಕೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ.