K2kannadanews.in
Health tips : ಪ್ರತಿನಿತ್ಯ ನಾವು ಬಳಸುವ ಅಡುಗೆ (Kitchen) ಸಾಮಾಗ್ರಿಯಲ್ಲಿಯೇ ಸಾಕಷ್ಟು ಆರೋಗ್ಯ (Health) ಮತ್ತು ಸೌಂದರ್ಯ (Buety) ವೃದ್ಧಿಸುವ ಪದಾರ್ಥಗಳಿವೆ. ಅದರಲ್ಲೂ ಕರಿಬೇವಿನ ಎಲೆಗಳನ್ನು (curry leaves) ತಿನ್ನುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ (Hemoglobin) ಹೆಚ್ಚಾಗುತ್ತದೆ ಮತ್ತು ಕಬ್ಬಿಣದ (Iron) ಕೊರತೆ ಕಡಿಮೆಯಾಗುತ್ತದೆ. ಇದು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಅದೇನು ಗೊತ್ತಾ..
ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ (Calcium) ಸಮೃದ್ಧವಾಗಿದ್ದು ಹಲ್ಲು (Teeth) ಮತ್ತು ಆರೋಗ್ಯಕ್ಕೆ ಒಳ್ಳೆಯದು. ಕರಿಬೇವು ತಿನ್ನುವುದರಿಂದ ಸಂಧಿವಾತ ಮತ್ತು ಮಧುಮೇಹ ಇರುವವರಲ್ಲಿ ಮೂಳೆ ನೋವು ಕಡಿಮೆಯಾಗಿ, ಮೂಳೆಗಳು ಬಲಗೊಳ್ಳುತ್ತವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದರೆ, ಕಿಡ್ನಿಯಲ್ಲಿ ಶೇಖರಣೆಯಾದ ತ್ಯಾಜ್ಯ ನಿವಾರಣೆಯಾಗುತ್ತದೆ. ಮೂತ್ರದ ಕಾರ್ಯವು ಸುಧಾರಿಸುತ್ತದೆ. ಕರಿಬೇವಿನ ಸೊಪ್ಪಿನಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನ ಬಲಪಡಿಸುತ್ತದೆ. ಸೋಂಕುಗಳನ್ನ ತಡೆಯುತ್ತದೆ.
ಕರಿಬೇವಿನ ಎಲೆಗಳನ್ನ ತಿನ್ನುವುದರಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನ ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾದರೆ ಬಿಪಿ ಕೂಡ ನಿಯಂತ್ರಣಕ್ಕೆ ಬರುತ್ತದೆ. ಕರಿಬೇವಿನ ಎಲೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಕರಿಬೇವಿನ ಎಲೆಯಲ್ಲಿರುವ ವಿಟಮಿನ್ ಬಿ12 ಮತ್ತು ವಿಟಮಿನ್ ಇ ಕೂದಲುದುರುವಿಕೆಯನ್ನು ಕಡಿಮೆ ಮಾಡುತ್ತದೆ.