K2kannadanews.in
Health Tips : ತಾಂತ್ರಿಕ ಯುಗದಲ್ಲಿ ಕಂಪ್ಯೂಟರ್ ಕೆಲಸದಲ್ಲಿ ದೈಹಿಕ ಶ್ರಮ ಇಲ್ಲದೇ ದೇಹದಲ್ಲಿ ಆಲಸ್ಯತನ ಮತ್ತು ಆಯಾಸ ಸೇರಿಕೊಂಡು, ಸೋಂಬೇರಿಗಳನ್ನಾಗಿ ಮಾಡುತ್ತಿದೆ. ಇದರಿಂದ ದೂರವಾಗಿ ದಿನವಿಡಿ ಉಲ್ಲಾಸದಿಂದ ಇರಲು ಈ ಎನರ್ಜಿ ಡ್ರಿಂಕ್ ಸೇವಿಸಿ..
ಕೆಲವರು ಟೀ ಅಥವಾ ಕಾಫಿ ಕುಡಿದ್ರೆ ಎನರ್ಜಿ ಬರುತ್ತೆ ಅಂತಾರೆ ಆದ್ರೆ, ಅವು ನಮ್ಮನ್ನು ಸ್ವಲ್ಪ ಸಮಯದವರೆಗೆ ಮಾತ್ರ, ನಂತರ ಮತ್ತೆ ಆಯಾಸ ಮತ್ತು ಸೋಮಾರಿತನ ನಮ್ಮನ್ನು ಕಾಡುತ್ತದೆ. ಹಾಗಾಗಿ ಕೆಲವು ಎನರ್ಜಿ ಡ್ರಿಂಕ್‌ಗಳನ್ನು ಕುಡಿಯಬಹುದು. ವಿಟಮಿನ್ ಮತ್ತು ಮಿನರಲ್‌ಗಳು ಇರುವುದರಿಂದ ದಿನವಿಡೀ ನಮಗೆ ಶಕ್ತಿಯನ್ನು ತುಂಬುತ್ತದೆ. ಮುಖ್ಯವಾಗಿ ನೀವು ಮನೆಯಲ್ಲೇ ಇವುಗಳನ್ನು ಸುಲಭವಾಗಿ ತಯಾರಿಸಬಹುದು.
* ಬಾಳೆಹಣ್ಣಿನ ಮಿಲ್ಕ್ ಶೇಕ್ : ಒಂದು ಬಾಳೆಹಣ್ಣು, ನಾಲ್ಕಾರು ಬಾದಾಮಿ, ಗೋಡಂಬಿ ಮತ್ತು ಇತರ ಡ್ರೈ ಫ್ರೂಟ್‌ಗಳನ್ನು ಹಾಲಿನೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬೇಕಿದ್ದರೆ ಬಾಳೆಹಣ್ಣಿನ ಜೊತೆಗೆ ಓಟ್ಸ್ ಕೂಡ ಬೆರೆಸಿ ಸ್ಮೂಥಿ ಮಾಡಿ ಕುಡಿಯಬಹುದು. ಬಾಳೆಹಣ್ಣು ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಬೆಳಗ್ಗೆ ಬಾಳೆಹಣ್ಣಿನಿಂದ ಮಾಡಿದ ಮಿಲ್ಕ್ ಶೇಕ್ ಕುಡಿದರೆ ದಿನವಿಡೀ ಶಕ್ತಿಯ ಅನುಭವವಾಗುತ್ತದೆ.
* ದಾಳಿಂಬೆ ರಸ : ಈ ಹಣ್ಣು ಕಾಸ್ಟ್ಲಿ ಅನಿಸಿದರು ದಾಳಿಂಬೆಯಲ್ಲಿ ವಿಟಮಿನ್ ಸಿ, ಕೆ, ಇ, ಮ್ಯಾಂಗನೀಸ್, ಕಬ್ಬಿಣ, ರಂಜಕ, ಪೊಟ್ಯಾಸಿಯಮ್ ಮತ್ತು ಸತುವಿನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದರ ಬಳಕೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ದಾಳಿಂಬೆ ಜ್ಯೂಸ್ ಮಾಡಿಕೊಂಡು ಅದಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿಕೊಂಡು ಸೇವಿಸಿ.
* ಹರ್ಬಲ್ ಟೀ : ಇದು ಅತ್ಯಂತ ಆರೋಗ್ಯಕರ ಎನರ್ಜಿ ಡ್ರಿಂಕ್. ಏಲಕ್ಕಿ, ಶುಂಠಿ ಮತ್ತು ಅರಿಶಿನವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಬೇಕಿದ್ದರೆ ಸ್ವಲ್ಪ ಬ್ಲಾಕ್ ಸಾಲ್ಟ್ ಕೂಡ ಬೆರೆಸಬಹುದು. ಮನೆಯಲ್ಲಿ ತಯಾರಿಸಿದ ಈ ಗಿಡಮೂಲಿಕೆ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.