K2kannadanews.in
Health tips ಆರೋಗ್ಯ ಭಾಗ್ಯ : ಪ್ರಸ್ತುತ ಬಿಜಿ ಲೈಫ್ (life) ನಲ್ಲಿ ಅಲೆದಾಡಿ ದಿನವಿಡಿ (hole day) ದುಡಿದ ಬಳಿಕ ರಾತ್ರಿ (Night) ನಿದ್ರಿಸುವಾಗ ದೇಹದ (Body) ಸಂಪೂರ್ಣ ಆಯಾಸವು ನಿವಾರಣೆ ಆಗಿ ಮರುದಿನ ಮತ್ತೆ ಹೊಸ ಚೈತನ್ಯದಿಂದ ಎದ್ದೇಳುವಂತೆ ಆಗುವುದು. ಹೀಗಾಗಿ ಮಲಗುವ ಮೊದಲು ಮಾಡುವಂತಹ ರಾತ್ರಿಯ ಊಟವೂ (Dinner) ನಿದ್ರೆ ಹಾಗೂ ದೇಹದ ಚೈತನ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು.
ರಾತ್ರಿ ಮಲಗುವ ಮೊದಲು ಲಘು ಆಹಾರ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಸರಿಯಾದ ನಿದ್ರೆ ಸಿಗುತ್ತದೆ. ಮರುದಿನ ದೇಹವು ಚೈತನ್ಯದಿಂದ ಇರುತ್ತದೆ. ಕೆಲವರು ರಾತ್ರಿ ಊಟ ರುಚಿಕರವಾಗಿದ್ದರೆ, ಆಗ ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಆದರೆ ಅದು ಸರಿಯಾದ ಕ್ರಮವಲ್ಲ. ರಾತ್ರಿ ಜೀರ್ಣಕ್ರಿಯೆಯು ನಿಧಾನವಾಗಿರುವ ಕಾರಣದಿಂದ ಮಿತವಾಗಿ ಊಟ ಮಾಡಬೇಕು. ಹಾಗಾಗಿ ರಾತ್ರಿ ಅತಿಯಾಗಿ ಊಟ ಮಾಡುವುದನ್ನು ತಡೆಯಲು ಕೆಲವು ಸಲಹೆಗಳು
ರಾತ್ರಿ ಊಟಕ್ಕೆ 30 ನಿಮಿಷ ಮೊದಲು ಒಂದು ಲೋಟ ನೀರು ಕುಡಿದರೆ ಅದರಿಂದ ತುಂಬಾ ಕಡಿಮೆ ಕ್ಯಾಲರಿ ಸೇವನೆ ಮಾಡಬಹುದು. ಒಂದು ಗಂಟೆ ಅಥವಾ ಅರ್ಧ ಗಂಟೆಗೆ ಮೊದಲು ಒಂದು ಲೋಟ ನೀರು ಕುಡಿದರೆ ಆಗ ಊಟ ಕಡಿಮೆ ಮಾಡಬಹುದು.
ರಾತ್ರಿ ಊಟವನ್ನು ಬೇಗನೆ ಸಿದ್ಧಪಡಿಸಿಕೊಂಡು ಇಟ್ಟರೆ ಆಗ ಹೆಚ್ಚು ಬಯಕೆ ಆಗುವುದಿಲ್ಲ. ಹೊರಗಡೆ ಹೋಗಿ ಊಟ ಮಾಡುವುದಾದರೆ ಪ್ರೋಟೀನ್ ಅಧಿಕವಾಗಿ ಇರುವ ಆಹಾರ ಸೇವನೆ ಮಾಡಿ. ಇದರಿಂದ ಹೊಟ್ಟೆ ಬೇಗನೆ ತುಂಬುವುದು ಮತ್ತು ಕ್ಯಾಲರಿ ಸೇವನೆ ಕಡಿಮೆ ಮಾಡಬಹುದು.
ತಡರಾತ್ರಿ ಊಟ ಮಾಡಿದರೆ ಅದರಿಂದ ಅತಿಯಾಗಿ ತಿನ್ನುವುದು ಅಭ್ಯಾಸವಾಗುವುದು. ಮಲಗುವ ಎರಡು ಗಂಟೆಗೆ ಮೊದಲು ರಾತ್ರಿ ಊಟ ಪೂರೈಸಿದರೆ ಒಳ್ಳೆಯದು. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುವುದು.