K2kannadanews.in
cardamom improves health : ಭಾರತೀಯ ಪರಂಪರೆಯಲ್ಲಿ ಆಯುರ್ವೇದ ಚಿಕಿತ್ಸೆಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಅಂತಿಗೆ ಮನೆಯಲ್ಲಿ ಸಿಗುವ ಪದಾರ್ಥಗಳ ಆರೊಗ್ಯ ಮೇಲೆ ಪರಿಣಾಮ ಬೀರುವ ಬಗ್ಗೆ ಆಯುರ್ವೇದ ಶಾಸ್ತ್ರದಲ್ಲಿ ಸಾಕಷ್ಟು ಉಲ್ಲೇಖಗಳು ಕೂಡ ಆಗಿವೆ. ಅಂತ ಏಲಕ್ಕಿ ಕೂಡ ಒಂದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಪದಾರ್ಥವಾಗಿದೆ.
ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಏಲಕ್ಕಿಯನ್ನು ಸೇರಿಸುವುದರಿಂದ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡಬಹುದು. ಜೊತೆಗೆ ಹೊಟ್ಟೆಯ ಹುಣ್ಣುಗಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಹಸಿರು ಏಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಏಲಕ್ಕಿ ಸೇವನೆಯು ಟೈಪ್ 2 ಮಧುಮೇಹ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಏಲಕ್ಕಿ ತಿನ್ನುವುದರಿಂದ ದೇಹದ ತೂಕ ಕೂಡ ಇಳಿಕೆ ಆಗುತ್ತೆ. ಇದಲ್ಲದೆ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಏಲಕ್ಕಿ ತಿನ್ನುವುದು ಒಳ್ಳೆಯದು.
ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಹೇರಳವಾಗಿ ಇರುತ್ತವೆ. ಏಲಕ್ಕಿಯನ್ನು ನಿಯಮಿತವಾಗಿ ತಿನ್ನುವುದು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಆಂಟಿಮೈಕ್ರೊಬಿಯಲ್ ನಿಂದ ಸಮೃದ್ಧವಾಗಿರುವ ಏಲಕ್ಕಿಯು ಸೋಂಕುಗಳ ವಿರುದ್ಧ ಪರಿಣಾಮಕಾರಿ. ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತೆ. ಬಾಯಿಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಬಾಯಿಯ ದುರ್ವಾಸನೆ ತೊಡೆದುಹಾಕಲು ಅನೇಕರು ಏಲಕ್ಕಿಯನ್ನು ತಿನ್ನುತ್ತಾರೆ. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 5 ನಿಮಿಷಗಳ ಕಾಲ ಏಲಕ್ಕಿಯನ್ನು ಅಗಿಯುವುದು ಉತ್ತಮ.
ಏಲಕ್ಕಿ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹ ಉತ್ತಮವಾಗಿದೆ. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವ ಏಲಕ್ಕಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಕೋಶಗಳನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು ಆಹಾರದಲ್ಲಿ ಸೇರಿಸುವ ಮೂಲಕ, ನೀವು ಕ್ಯಾನ್ಸರ್ ಅನ್ನು ನಿಮ್ಮಿಂದ ದೂರವಿಡಬಹುದು. ನಿಮಗಿಷ್ಟವಿದ್ದರೆ ಚಹಾಕ್ಕೆ ಏಲಕ್ಕಿಯನ್ನು ಕೂಡ ಸೇರಿಸಬಹುದು. ಏಲಕ್ಕಿಯನ್ನು ಬೆರೆಸುವುದರಿಂದ ಚಹಾ ತುಂಬಾ ರುಚಿಕರವಾಗಿರುತ್ತದೆ. ಅಲ್ಲದೇ ಚಹಾದ ಪರಿಮಳವು ತುಂಬಾ ಆಹ್ಲಾದಕರವಾಗಿರುತ್ತದೆ. ಏಲಕ್ಕಿಯು ದೇಹದಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಲು ಬಿಡುವುದಿಲ್ಲ.
(Disclaimer: ಈ ಲೇಖನೆ ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ವೈದ್ಯರ ಸಲಹೆಯನ್ನೂ ಒಮ್ಮೆ ಪಡೆಯಿರಿ.)