ಸೊಳ್ಳೆಗಳನ್ನು ಓಡಿಸಲು ಕಾಯಿಲ್ ಉಪಯೋಗಿಸುತ್ತಿರಾ ಇದನ್ನೊಮ್ಮೆ ಓದಿ..!

K 2 Kannada News
ಸೊಳ್ಳೆಗಳನ್ನು ಓಡಿಸಲು ಕಾಯಿಲ್ ಉಪಯೋಗಿಸುತ್ತಿರಾ ಇದನ್ನೊಮ್ಮೆ ಓದಿ..!
Oplus_0
WhatsApp Group Join Now
Telegram Group Join Now

K2kannadanews.in

mosquitoes coils ಆರೋಗ್ಯ : ಮಳೆಗಾಲ ಆರಂಭವಾಗಿದೆ, ಸೊಳ್ಳೆಗಳ (mosquito) ಕಾಟ ಮಿತಿ ಹೋಗಿದೆ, ಬೇಸಿಗೆ (Summer), ಚಳಿಗಾಲ (Winter), ಎನ್ನದೇ ಸದಾಕಾಲ ಸೊಳ್ಳೆಗಳ ಕಾಟ ಇದ್ದೇ ಇರುತ್ತದೆ. ಆದ್ರೆ ಇವುಗಳನ್ನು ಓಡಿಸುವುದು, ತಪ್ಪಿಸಿಕೊಳ್ಳೊದು ಸುಲಭದ ಕೆಲಸವಲ್ಲ. ಹಾಗಾಗಿ ಹಲವರು ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ಗಳನ್ನು (Coils) ಬಳಸುತ್ತಾರೆ. ಸೊಳ್ಳೆ ನಿವಾರಕ ಕಾಯಿಲ್‌ಗಳಿಂದ ಅನೇಕ ಅಪಾಯಗಳನ್ನು (Danger’s) ಆಹ್ವಾನಿಸುತ್ತೇವೆ. ಇಲ್ಲಿ ಹೊರಹೊಮ್ಮುವ ಹೊಗೆ (Fog) ವಿಷಕಾರಿ ಆಗಿದೆ.

ಇದನ್ನು ಪ್ರತಿನಿತ್ಯ (Every day) ಉಪಯೋಗಿಸೊದ್ರಿಂದ ಗಂಭೀರ ಉಸಿರಾಟದ ಕಾಯಿಲೆಗಳಿಗೆ (Breathing problem) ಕಾರಣವಾಗಬಹುದು. ಇಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬೆಂಜೊ ಫ್ಲೋರೊಇಥೇನ್ ಮತ್ತು ಬೆಂಜೊ ಪೈರಿನ್‌ಗಳಂತಹ ಅಂಶಗಳನ್ನು ಒಳಗೊಂಡಿದೆ. ಇವು ಅಸ್ತಮಾವನ್ನು ಉಂಟುಮಾಡುತ್ತವೆ.

ಇನ್ನೂ ಮನೆಯಲ್ಲಿ ನವಜಾತ ಶಿಶು, ಯಾವುದೇ ಮಗುವಿನ ಬಳಿ ಸೊಳ್ಳೆ ಕಾಯಿಲ್‌ಗಳನ್ನು ಇಡಬೇಡಿ. ಅದರಿಂದ ಹೊರಹೊಮ್ಮುವ ಹೊಗೆ ಮಗುವಿಗೆ ತುಂವಾ ಹಾನಿಕಾರಕ. ಸೊಳ್ಳೆ ಕಾಯಿಲ್‌ನ ಹೊಗೆಯನ್ನು ದೀರ್ಘ ಸಮಯದವರೆಗೆ ಸೇವಿಸಿದರೆ ಚರ್ಮದ ದದ್ದು ಉಂಟಾಗುತ್ತದೆ. ಇಲ್ಲಿ ಹೊರಸೂಸುವ ಹೊಗೆ ಅತಿಯಾದ್ರೆ ಚರ್ಮದ ಅಲರ್ಜಿ ಉಂಟಾಗುತ್ತದೆ.

 

ಸೊಳ್ಳೆ ಕಾಯಿಲ್ ಬಳಕೆ ಕಣ್ಣಿಗೆ ಹಾನಿಕಾರಕ. ಅದರಿಂದ ಹೊರಹೊಮ್ಮುವ ಹೊಗೆ ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಮಸುಕನ್ನು ಉಂಟು ಮಾಡಬಹುದು. ಕೆಲವೊಮ್ಮೆ ಸಮಸ್ಯೆ ಎಷ್ಟು ಗಂಭೀರವಾಗುತ್ತದೆ ಎಂದರೆ ಹೊಗೆಯಿಂದಾಗಿ ಕಣ್ಣಿನ ಪೊರೆಯಂತಹ ಕಾಯಿಲೆ ಬರಬಹುದು. ಕೆಲವರು ಹಾಸಿಗೆಯ ಕೆಳಗೆ ಸೊಳ್ಳೆ ಕಾಯಿಲ್‌ ಹಚ್ಚಿಟ್ಟುಕೊಳ್ತಾರೆ. ಇದರಿಂದ ಹೊಗೆ ನೇರವಾಗಿ ಅವರ ದೇಹದೊಳಗೆ ಹೋಗುತ್ತದೆ. ಸೊಳ್ಳೆ ಕಾಯಿಲ್‌ನಲ್ಲಿರುವ ಅನೇಕ ಹಾನಿಕಾರಕ ರಾಸಾಯನಿಕಗಳು ಗಂಭೀರ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಇದನ್ನು ತುಂಬಾ ಹತ್ತಿರ ಇಡುವುದರಿಂದ ಉಸಿರಾಟದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.

WhatsApp Group Join Now
Telegram Group Join Now
Share This Article