ಪ್ರತಿನಿತ್ಯ ತಾಮ್ರದ ಪಾತ್ರೆಯ ನೀರು ಕುಡಿದ್ರೆ ಎಷ್ಟು ಲಾಭ ಗೊತ್ತಾ..?

K 2 Kannada News
ಪ್ರತಿನಿತ್ಯ ತಾಮ್ರದ ಪಾತ್ರೆಯ ನೀರು ಕುಡಿದ್ರೆ ಎಷ್ಟು ಲಾಭ ಗೊತ್ತಾ..?
Oplus_131072
WhatsApp Group Join Now
Telegram Group Join Now

K2kannadanews.in

copper pot water ಆರೋಗ್ಯ ಭಾಗ್ಯ : ಪ್ರಸ್ತುತ ಒತ್ತಡದ ಜೀವನದಲ್ಲಿ (Life) ನಮ್ಮ ಆರೋಗ್ಯದ (Helth) ಬಗ್ಗೆ ನಾವು ಗಮನ ಹರಿಸುತ್ತಿಲ್ಲ. ಇದರಿಂದ ಆರೊಗ್ಯ‌ ಸಮಸ್ಯೆಗೆ (Problem) ಕಾರಣವಾಗುತ್ತೆ. ಹಾಗಾಗಿ ಕೆಲವೊಂದಿಷ್ಟು ಮುಂಜಾಗ್ರತೆ (Privations) ತೆಗೆದುಕೊಂಡರೇ ಇವುಗಳಿಂದ ದೂರ ಇರಬಹುದು. ಅದರಲ್ಲಿ ತಾಮ್ತದ ಪಾತ್ರೆಯ (Copper pot) ನೀರು ಕುಡಿಯುವುದರಿಂದ (Drink water)ಸಿಗುತ್ತೆ ದೀರ್ಘ ಕಾಲದ ಆರೋಗ್ಯ ಸ್ಥರತೆ.

ತಾಮ್ರದ ಪಾತ್ರೆಯಲ್ಲಿನ ನೀರು ಪ್ರತಿನಿತ್ಯ (Every day) ಸೇವಿಸದರೇ ಅಧಿಕ ರಕ್ತದೊತ್ತಡವನ್ನು (BP) ಕಡಿಮೆ ಮಾಡುವುದಲ್ಲದೇ ನಮ್ಮ ಹೃದಯದ (Heart) ಆರೋಗ್ಯವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ. ತಾಮ್ರದ ಪಾತ್ರೆಯ ನೀರು ಕುಡಿದ್ರೆ ದೊರೆಯುವ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ…

ಜಾಂಡೀಸ್​ (Jaundice) ಮತ್ತು ಅತಿಸಾರ (diarrhea) ಸಾಮಾನ್ಯವಾಗಿ ನೀರಿನಿಂದ ಹರಡುವ ಖಾಯಿಲೆಗಳಾಗಿದ್ದು, ತಾಮ್ರದ ಲೋಟದಲ್ಲಿ ನೀರು ಸೇವಿಸುವುದರಿಂದ ಹೊಟ್ಟೆ (stomach) ನಿರ್ವಿಷಗೊಳ್ಳುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ತಾಮ್ರದ ಅಂಶವಿರುವ ನೀರು ಕಾಯಿಲೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ತಡೆಯುತ್ತವೆ.

ಅನೇಮಿಯಾ (anomie) ಮಹಿಳೆಯರನ್ನು (Women) ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದ್ದು, ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ. ಜೊತೆಗೆ ಹಿಮೊಗ್ಲೋಬಿನ್ (Hemoglobin) ಮಟ್ಟ ಹೆಚ್ಚುತ್ತದೆ.

ಗರ್ಭಿಣಿ (Pregnant) ಮಹಿಳೆಯರು ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದರಿಂದ ಮಗುವಿನ ಹೃದಯ (Baby heart), ರಕ್ತನಾಳಗಳು ಮತ್ತು ಮೂಳೆಗಳು (bouns) ಸರಿಯಾಗಿ ಬೆಳೆಯಲು ಸಹಾಯಕವಾಗುತ್ತದೆ. ತಾಮ್ರ ಅಂಶವಿರುವ ನೀರಿನಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ತಾಮ್ರದ ಅಂಶವಿರುವ ನೀರು ದೇಹದ ಕೊಲೆಸ್ಟ್ರಾಲ್​ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಮ್ರದ ಪಾತ್ರೆಯ ನೀರು ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.

WhatsApp Group Join Now
Telegram Group Join Now
Share This Article