K2kannadanews.in
Health tips ಆರೋಗ್ಯ ಭಾಗ್ಯ : ಬೆಳಿಗ್ಗೆ (Morning) ಅಥವಾ ಸಂಜೆಯಾಗುತ್ತಿದ್ದಂತೆ (Evening) ಮತ್ತು ಆತ್ಮೀಯರು (Friends) ಸಿಕ್ಕಾಗ ಕಾಫಿ cofee) ಕುಡಿಯೊಣ್ವಾ ಅನ್ನೋದು ಸಹಜ ಅಲ್ವಾ, ನೀವು ಬಾಯಿ ಚಪ್ಪರಿಸುತ್ತಾ ಸವಿಯೋ ಕಾಫೀನೇ ನಿಮ್ಮ ಆರೋಗ್ಯದ (Health) ಸ್ಥಿತಿಯನ್ನ ಕಂಟ್ರೋಲ್ (control) ಮಾಡುತ್ತೆ ಅಂದ್ರೆ ನೀವು ನಂಬಲೇಬೇಕು.
ಹೌದು, ಅಧ್ಯಯನವೊಂದರ (Study) ಪ್ರಕಾರ ಒಂದು ದಿನದಲ್ಲಿ ಮೂರು ಕಪ್ ಕಾಫಿ (3 CUP) ಕುಡಿಯುವುದರಿಂದ ನೀವು ಟೈಪ್ 2 ಡಯಾಬಿಟಿಸ್ ಕಾಯಿಲೆ, ಪಾರ್ಶ್ವವಾಯು ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರಾಗಬಹುದಂತೆ. The Journal of Clinical Endocrinology and Metabolism ನಡೆಸಿರುವ ಅಧ್ಯಯನದ ಪ್ರಕಾರ ತಜ್ಞರು ಹೇಳುವಂತೆ ಪ್ರತಿದಿನವೂ ಮೂರ್ ಕಪ್ ಕಾಫಿ ಅಥವಾ 300 ಎಂ.ಜಿಯಷ್ಟು ಕೆಫೀನ್ ದೇಹಕ್ಕೆ ಹೋಗುವುದರಿಂದ ಹೃದಯಸಂಬಂಧಿತ ಕಾಯಿಲೆಗಳು ಬರುವುದನ್ನು ತಡೆಯುತ್ತವೆ. ಇದಲ್ಲದೆ ಕಾಫಿಯಲ್ಲಿ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳೂ ಇವೆ.
ಹಾಗಾಗಿ ಮಿತವಾದ ಕಾಫಿ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಹಾಗೂ ಮಧುಮೇಹದಂತ ಕಾಯಿಲೆಗಳಿಗೆ ಗುಡ್‌ಬೈ ಹೇಳಬಹುದು. ಕಾಫಿ ಕುಡಿಯುವ ಅಭ್ಯಾಸದಿಂದಾಗಿ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಕೂಡ ಹೆಚ್ಚಾಗುತ್ತದೆ. ನಿಮ್ಮ ನೆನಪಿನ ಶಕ್ತಿ ವೃದ್ಧಿಸುವಲ್ಲಿಯೂ ಹೆಚ್ಚು ನೆರವಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ಅಂಶವು ನಿಮ್ಮ ಮೆದುಳಿನ ನರಮಂಡಲವನ್ನು ಸುಸ್ಥಿತಿಗೆ ತಂದು, ನಿಮ್ಮ ಮನಸ್ಸನ್ನು ಸಹ ಹಗುರಗೊಳಿಸುತ್ತದೆ. ಉತ್ತಮ ಮನಸ್ಥಿತಿ ನಿಮ್ಮದಾಗುವುದರಿಂದ ನಿಮ್ಮ ಮೂಡ್ ಕೂಡ ಚೆನ್ನಾಗಿರುತ್ತೆ. ಡಿಪ್ರೆಷನ್ನಂತಹ ಮಾನಸಿಕ ಕಾಯಿಲೆಗಳಿಂದಲೂ ನಿಮ್ಮನ್ನು ದೂರವಿಡುತ್ತದೆ. ಮಿತವಾಗಿ ಕಾಫಿ ಸೇವಿಸುವುದರಿಂದಲೂ ಆರೋಗ್ಯಕರ ಜೀವನ ಶೈಲಿ ನಿಮ್ಮದಾಗುತ್ತದೆ.
ನಿಮ್ಮ ಮನೆಯಲ್ಲಿ ಯಾರಿಗಾದರೂ ಅಸ್ತಮಾ ಇದ್ದು, ಉಸಿರಾಡಲು ಕಷ್ಟವಾಗುತ್ತಿದ್ದರೆ ಕೂಡಲೇ ಅವರಿಗೆ ಸಕ್ಕರೆರಹಿತ ಕಾಫಿ ಕುಡಿಯಲು ನೀಡಿರಿ. ಕುಡಿಯಲು ಸ್ವಲ್ಪ ಕಹಿಯಾದರೂ ಅಸ್ತಮಾ ಸಮಸ್ಯೆ ಮಾಯವಾಗುತ್ತದೆ. ಉಸಿರಾಟದ ತೊಂದರೆಗೂ ಕಾಫಿ ರಾಮಬಾಣ. ಯಾವುದೇ ಆದರೂ ಹೆಚ್ಚಾದರೆ, ಹೆಚ್ಚು ಕಮ್ಮಿ ಆಗುತ್ತೆ. ಹಾಗಾಗಿ ಹೆಳಿದ್ದಾರಲ್ಲಾ ಅಂತ ಅತಿಯಾಗಿ ಬಳಸದೆ ಮಿತವಾಗಿ ಬಳಸಿದರೆ ಎಲ್ಲವೂ ಹಿತ..