K2kannadanews.in
Mobile drama ವೈರಲ್ ವೀಡಿಯೋ : ಮಕ್ಕಳು ಸ್ಮಾರ್ಟ್ಫೋನ್ಗಳಿಗೆ ಒಗ್ಗಿಕೊಳ್ಳುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಪೋಷಕರು ಮೊದಲು ಮಕ್ಕಳಿಗೆ ತಮಾಷೆಯ ರೀತಿಯಲ್ಲಿ ಫೋನ್ ಗಳನ್ನು ನೀಡುತ್ತಾರೆ. ಆದರೆ ಅದರ ನಂತರ, ಸ್ಮಾರ್ಟ್ಫೋನ್ಗಳು ಮಕ್ಕಳ ನೆಚ್ಚಿನ ಆಟಿಕೆಯಾಗುತ್ತದೆ. ಬರು ಬರುತ್ತಾ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗುತ್ತಾರೆ.
ಕಣ್ಣಿಗೆ ರಕ್ತ ಬಂದಿರುವ ರೀತಿ ಬ್ಯಾಂಡೇಜ್ ಸುತ್ತಿರುವ ರೀತಿ, ನಟಿಸಿ, ತಾವು ಮೊಬೈಲ್ ಬಳಸಿದ ಕಾರಣಕ್ಕೆ, ತಮ್ಮ ಕಣ್ಣಿನಿಂದ ರಕ್ತ ಬರುತ್ತಿದೆ. ನೀವು ಮೊಬೈಲ್ ಬಳಸಬೇಡಿ ಎಂದು ತಿಳಿ ಹೇಳಿದ್ದಾರೆ. ಇದನ್ನು ನೋಡಿರುವ ಮಕ್ಕಳು ಕಂಗಾಲಾಗಿದ್ದು, ಅವರ ಕೈಗೆ ಮೊಬೈಲ್ ಕೊಟ್ಟರೂ, ಅದನ್ನು ತೆಗೆದುಕೊಳ್ಳದೇ, ತಾವು ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ ಎಂದಿದ್ದಾರೆ.
ಈ ವೀಡಿಯೋ ಎಕ್ಸ್‌ನಲ್ಲಿ ಸಖತ್ ವೈರಲ್ ಆಗಿದ್ದು, ಶಿಕ್ಷಕಿಯ ಈ ಐಡಿಯಾಗೆ ಎಲ್ಲರೂ ಭೇಷ್ ಎಂದಿದ್ದಾರೆ. ಅಲ್ಲದೇ, ಎಲ್ಲ ಶಾಲೆಗಳಲ್ಲಿ ಇದೇ ರೀತಿಯಾಗಿ ಮಕ್ಕಳಿಗೆ ಮೊಬೈಲ್ ಬಳಕೆಯ ಬಗ್ಗೆ ಹೆದರಿಕೆ ಹುಟ್ಟಿಸಿದರೆ, ಉತ್ತಮ ಅಂತಾ ಹೇಳಿದ್ದಾರೆ.