ಮುಖದ ಮೇಲೆ ಮೊಡವೆ ಮತ್ತು ಕಲೆಗಳಿವೆಯೇ ಅದಕ್ಕೆ ರಾಮಬಾಣ..!

K 2 Kannada News
ಮುಖದ ಮೇಲೆ ಮೊಡವೆ ಮತ್ತು ಕಲೆಗಳಿವೆಯೇ ಅದಕ್ಕೆ ರಾಮಬಾಣ..!
Oplus_131072
WhatsApp Group Join Now
Telegram Group Join Now

K2kannadanews.in

Health tips ಆರೋಗ್ಯ ಭಾಗ್ಯ : ವಿಟಾಮಿನ್ (Vitamin) ಗಳ ಕಣಜ, ರೋಗ ನಿರೋಧಕ. ಅದ್ಭುತ ಗಿಡಮೂಲಿಕೆ. ಇದು ಒಂದು ರೀತಿಯಲ್ಲಿ ಮಾನವನ ಅಡಿಯಿಂದ ಮುಡಿಯ ವರೆಗೂ ಎಲ್ಲಾ ರೀತಿಯಲ್ಲಿಯೂ ಉಪಯೋಗಕ್ಕೆ ಬರುವಂತಹ ಔಷಧೀಯ (mediation) ಗುಣಗಳನ್ನು ಹೊಂದಿದೆ ಈ ಅಲೋವೆರ.

 

ಅಲುವೇರ ರಸದಲ್ಲಿ ವಿಟಮಿನ್ ಎ, ಸಿ, ಇ, ಬಿ 1, ಬಿ 2, ಬಿ 3, ಬಿ 6, ಬಿ 12 ಸಮೃದ್ಧವಾಗಿದೆ. ಇದನ್ನು ಜ್ಯೂಸ್ (Juice) ಅನ್ನು ಮಾಡಿ ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ. ಈ ಪಾನೀಯವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ರಸದಲ್ಲಿ ಕ್ಯಾಲೊರಿಗಳು ಕಡಿಮೆಯಿದ್ದು, ತೂಕ ಇಳಿಕೆಗೂ ಸಹಕಾರಿಯಾಗಿದೆ. ಅಲೋವೆರಾದಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೊತೆಗೆ ಶೀತ ಮತ್ತು ಜ್ವರದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಅಲೋವೆರಾದಲ್ಲಿರುವ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ನೈಸರ್ಗಿಕವಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲೋವೆರಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ತೇವಗೊಳಿಸುತ್ತವೆ ಮತ್ತು ಮೊಡವೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಕುಡಿಯುವುದರಿಂದ ನಿಮ್ಮ ಚರ್ಮ ಮೃದುವಾಗಿರುವುದಲ್ಲದೆ ತಾಜಾತನದಿಂದ ಕೂಡಿರುತ್ತದೆ ಜೊತೆಗೆ ಮುಖಕ್ಕೆ ಹೊಳಪನ್ನು ನೀಡುತ್ತದೆ.

WhatsApp Group Join Now
Telegram Group Join Now
Share This Article