K2kannadanews.in
Local News ಮುದುಗಲ್ : ಮುದುಗಲ್ ಪಟ್ಟಣದಲ್ಲಿ ಮೊಹರಂ ಹಬ್ಬದ ವೇಳೆ ಹಾಕಿದ ಅಂಗಡಿ ಮಾಲೀಕರಿಂದ ಗುತ್ತಿಗೆದಾರ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಅಂಗಡಿ ಮಾಲೀಕರಿಂದ ಮುದುಗಲ್ ಪುರಸಭೆ ಕಚೇರಿಗೆ ಮೂತ್ತಿಗೆ ಹಾಕಿ ಅಸಮಾಧಾನ ವ್ಯಕ್ತಪಡಿಸಲಾಯಿತು.
ತಾಲೂಕಿನ ಮುದುಗಲ್ಲ ಪಟ್ಟಣದಲ್ಲಿ ಪ್ರತಿವರ್ಷ ಐತಿಹಾಸಿಕ ಭಾವೈಕ್ಯತೆಯ ಮೊಹರಂ ಹಬ್ಬ ನಡೆಯುತ್ತದೆ. ಲಕ್ಷಾಂತರ ಜನ ಇಲ್ಲಿ ಸೇರುತ್ತಾರೆ. ಈ ವೇಳೆ ಕೆಲವರು ಅಲ್ಲಿ ವಿವಿಧ ಅಂಗಡಿಗಳನ್ನು ಹಾಕಿಕೊಳ್ಳುತ್ತಾರೆ. ಇದಕ್ಕಾಗಿ ಮುದುಗಲ್ ಪಟ್ಟಣ ಪಂಚಾಯಿತಿ ಸ್ಥಳ ನೀಡುವುದಕ್ಕೆ ಒಂದಷ್ಟು ಬಾಡಿಗೆಯನ್ನು ಕೂಡ ಕಟ್ಟಿಸಿಕೊಳ್ಳುತ್ತದೆ. ಇಲ್ಲಿ ನಿರ್ವಹಣೆಗಾಗಿ ಟೆಂಡರ್ ಕರೆದು ಓರ್ವ ಗುತ್ತಿಗೆದಾರನಿಗೆ ವಹಿಸುತ್ತಾರೆ. ಸುಮಾರು 20 ವರ್ಷಗಳಿಂದ ಆ ಒಂದು ಸ್ಥಳಕ್ಕಾಗಿ ಅಂಗಡಿ ಹಾಕುವ ಮಾಲೀಕರು ಎರಡರಿಂದ ಮೂರು ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರು.
ಆದರೆ ಈ ವರ್ಷ ಗುತ್ತಿಗೆ ಪಡೆದ ಗುತ್ತಿಗೆದಾರ, ಕಳೆದ ವರ್ಷಗಳಿಗಿಂತ ದುಪ್ಪಟ್ಟು ಬಾಡಿಗೆ ವಸೂಲು ಮಾಡುತ್ತಿದ್ದಾರೆ. 3000 ಬದಲಿಗೆ 10000 ಬಾಡಿಗೆ ಕೇಳುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿ, ಅಂಗಡಿಗಳ ಮಾಲೀಕರಿಂದ ಮುದಗಲ್ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದರು. ಪುರಸಭೆ ಮುಖ್ಯಾಧಿಕಾರಿ ಮುಂದೆ ವ್ಯಾಪಾರಸ್ಥರು ಅಳಲು ತೋಡಿಕೊಂಡರು. ಈ ಬಾರಿ ಮೊಹರಂ ಹಬ್ಬದಲ್ಲಿ ನೆಲ ಬಾಡಿಗೆ 4 ಲಕ್ಷ 26 ಸಾವಿರ ರೂ.ಗಳಿಗೆ ಟೆಂಡರ್ ಆಗಿದೆ. ಆದ್ರೆ ಟೆಂಡರ್ ನಲ್ಲಿ ಹಾಕಿರುವ ನಿಯಮಗಳನ್ನು ಮೀರಿ ಹೆಚ್ಚಿನ ಹಣ ವಸೂಲಿ ಕಂಡು ಬಂದರೆ, ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಮುಖ್ಯಾಧಿಕಾರಿ ಪ್ರವೀಣಕುಮಾರ್ ಬೋಗಾರ ಭರವಸೆ ನೀಡಿದ್ದಾರೆ.