ಟೂತ್ ಬ್ರಷ್ ಎಷ್ಟು ದಿನ ಬಳಸಬಹುದು..? : ವ್ಯಾಲಿಡಿಟಿ ಗೊತ್ತಾ..?

K 2 Kannada News
ಟೂತ್ ಬ್ರಷ್ ಎಷ್ಟು ದಿನ ಬಳಸಬಹುದು..? : ವ್ಯಾಲಿಡಿಟಿ ಗೊತ್ತಾ..?
WhatsApp Group Join Now
Telegram Group Join Now

K2kannadanews.in

toothbrush validity ಆರೋಗ್ಯ ಭಾಗ್ಯ : ಪ್ರತಿನಿತ್ಯ ನಮ್ಮ ದಿನ ಆರಂಭವಾಗುವುದು ಹಲ್ಲುಜ್ಜುದವರೊಂದಿಗೆ. ಈ ವೇಳೆ ನಾವು ಬಳಸುವ ಟೂತ್ ಬ್ರಷ್ ಬಗ್ಗೆ ನಿಮಗೆಷ್ಟು ಗೊತ್ತು..? ನಾವು ಒಂದು ರುದ್ರೇಶ್ ಎಷ್ಟು ದಿನ ಬಳಸಬಹುದು ಅದಕ್ಕೆ ವ್ಯಾಲಿಡಿಟಿ ಇದ್ಯಾ..? ಇದನ್ನ ನೀವು ತಿಳಿದುಕೊಳ್ಳಲೇ ಬೇಕು.

ಸಾಮಾನ್ಯವಾಗಿ, ಟೂತ್ ಬ್ರಷ್ ಅನ್ನು ಹಲ್ಲು ಮತ್ತು ಒಸಡುಗಳಲ್ಲಿ ಸಿಲುಕಿಹಾಕಿಕೊಂಡ ಪ್ಲೇಕ್ ಮತ್ತು ಆಹಾರದ ಕಣಗಳನ್ನು ತೆಗೆದುಹಾಕಲು ವಿನ್ಯಾಸಗೊಳಿಸಲಾಗಿದೆ. ಆದರೆ ಒಂದು ನಿರ್ದಿಷ್ಟ ಸಮಯದ ನಂತರ ಬ್ರಷ್‌ ಹಾಳಾಗಿ ಶುದ್ಧೀಕರಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.. ಆದರೂ ಅದನ್ನ ಬಳಸಿದರೆ ಹಲ್ಲು ಮತ್ತು ಒಸಡುಗಳ ಸಮಸ್ಯೆಗೆ ಕಾರಣವಾಗುಬೇಕಾಗುತ್ತದೆ..

ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ರೋಗಾಣುಗಳನ್ನು ಹರಡುವುದನ್ನು ತಪ್ಪಿಸಲು ನೀವು ಚೇತರಿಸಿಕೊಂಡ ನಂತರ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುವುದು ಉತ್ತಮ. ಇದು ಮರು ಸೋಂಕು ಹರಡುವಿಕೆಯನ್ನು ತಡೆಯುತ್ತದೆ.

ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ನಿಯಮಿತವಾಗಿ ಬದಲಾಯಿಸುವ ಪ್ರಯೋಜನಗಳು ಸಾಕಷ್ಟು ಇವೆ. ಟೂತ್ ಬ್ರಷ್ ಅನ್ನು ನೀವು ಆಗಾಗ್ಗೆ ಬದಲಾಯಿಸಿದಾಗ, ಹಲ್ಲು ಮತ್ತು ಒಸಡುಗಳಲ್ಲಿ ಸಿಲುಕಿಹಾಕಿಕೊಂಡಿದ್ದ ಪ್ಲೇಕ್ ಮತ್ತು ಆಹಾರದ ಕಣಗಳನ್ನು ಸರಿಯಾಗಿ ತೆಗೆದುಹಾಕುತ್ತದೆ.

ಉತ್ತಮ ಟೂತ್ ಬ್ರಷ್ ಬಳಕೆಯಿಂದ ಹಲ್ಲು ನೋವು ಮತ್ತು ವಸಡು ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು. ಸ್ವಚ್ಛವಾದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಕಡಿಮೆ. ಇದರಿಂದ ನಿಮಗೆ ಕೆಟ್ಟ ಉಸಿರಾಟದ ಸಮಸ್ಯೆ ಇರುವುದಿಲ್ಲ.

WhatsApp Group Join Now
Telegram Group Join Now
Share This Article