K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ.
ವಾಲ್ಮೀಕಿ (valmiki) ನಿಗಮದ 187 ಕೋಟಿ ಹಗರಣ ವಿಚಾರಕ್ಕೆ ಸಂಬಂದಿಸಿದಂತೆ ಯಾರೇ ತಪ್ಪಿತಸ್ಥರು ಇದ್ರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಿಗಮದ ಅಧ್ಯಕ್ಷ (President) ಬಸನಗೌಡ ದದ್ದಲ್ ಹೇಳಿದರು.
ನಗರದ ಪಂಡಿತ್ ಜಂಬಲದಿನ್ನಿ ಸಿದ್ದರಾಮಯ್ಯ ರಂಗಮಂದಿರದಲ್ಲಿ, SKE ಪ್ಯಾರಾಮೆಡಿಕಲ್ (Paramedical) ಮತ್ತು ನರ್ಸಿಂಗ್ ಕಾಲೇಜು (narsing college) ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವೈದ್ಯರಿಗೆ ಪುಷ್ಪ ಮಳೆ ಸುರಿಸುವ ಮೂಲಕ ಗೌರವಾ ಸಲ್ಲಿಸಲಾಯಿತು ತದನಂತರ ರೈತರು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಟಿಪ್ಪು ಸುಲ್ತಾನ್ (Tippu sulthan) ಉದ್ಯಾನವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ಮಾಡಿ, ಸರೋಜಿನಿ ಮಹಿಷಿ ವರದಿ (sarojini mahishi report) ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ (DC office) ಮುಂಭಾಗದಲ್ಲಿ ಸಿಪಿಐಎಂ (CPIM) ಪಕ್ಷದಿಂದ ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಕಳೆದ ವರ್ಷ ಮಳೆ ಬಾರದೆ ರಾಜ್ಯದಲ್ಲಿ (State) ಬರಗಾಲ ಆವರಿಸಿದೆ. ಜನರು ಸಂಕಷ್ಟದಲ್ಲಿದ್ದಾರೆ. ನೆರವಿಗೆ ಬರಬೇಕಾದ ಸರಕಾರ (Government) ಬೆಲೆ ಏರಿಕೆಯಿಂದ ಮತ್ತಷ್ಟು ಕಂಗಾಲು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾರದಗಡ್ಡೆ ಮಠದ ಆಸ್ತಿ ವಿವಾದಕ್ಕೆ (Land issue) ಸಂಬಂಧಿಸಿದಂತೆ ಆಂಧ್ರ ರಾಜ್ಯಕ್ಕೆ ಸಂಬಂಧಿಸಿದ ಸ್ವಾಮೀಜಿಗಳು, ಬಂದು ಇಲ್ಲಿ ಸುಖ ಸುಮ್ಮನೆ ಗೊಂದಲ ಉಂಟು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನ್ಯಾಯಾಲಯದ (Court) ಆದೇಶದ (Order) ಪ್ರಕಾರ ವರದಿ ಸಿದ್ದಪಡಿಸುತ್ತಿದ್ದು ಶಿವಕುಮಾರ ಸ್ವಾಮೀಜಿಯವರು ಈ ಮಠಕ್ಕೆ ಪೀಠಾಧಿಪತಿಯಾಗಲು ಬೇಕಾಗಿರುವ ಎಲ್ಲ ದಾಖಲೆಗಳನ್ನು (Documents) ಮಠದ ಭಕ್ತರು ಡಿಸಿಗೆ ಮನವಿ ಸಲ್ಲಿಸಿದರು.
ವಾಲ್ಮಿಕಿ ಸಮುದಾಯದ ಬೇಡಿಕೆ ಈಡೇರಿಕೆ ಒತ್ತಾಯಿಸಿ 80 ದಿನಗಳ ಕಾಲ ಪ್ರತಿಭಟನೆ (Protest) ಮಾಡಿದ್ದು ಈ ಒಂದು ಪ್ರತಿಭಟನೆಗೆ ಮಾಡಿದ ಪ್ರತಿಭಟನೆಗೆ ಬೆಂಬಲ ಸಿಗಲಿಲ್ಲ. ಸಮುದಾಯದ ಜನಪ್ರತಿನಿಧಿಗಳು ಕಂಡರು ಸಂಘಟನೆಗಳು ಯಾರು ಕೂಡ ಬೆಂಬಲ ಸೂಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.