K2kannadanews.in
Local News ಲಿಂಗಸುಗೂರ : ರಾಯಚೂರು ಜಿಲ್ಲೆಯಾದ್ಯಂತ ಕಳದ ಎರಡು ದಿನಗಳಿಂದ ಬಾರಿ ಮಳೆಯಾಗುತ್ತಿದ್ದು, ಹಳ್ಳ ಕುಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಲಿ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಚಲಿಸುತ್ತಿದ್ದ ಸಾರಿಗೆ ಬಸ್ಸೊಂದು ಮಧ್ಯ ಭಾಗದಲ್ಲಿ ಕೆಟ್ಟು ನಿಂತ ಘಟನೆ ಮುದುಗಲ್ ಬಳಿ ಜರುಗಿದ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಬಳಿ ಘಟನೆ ಜರುದ್ದು.ಬಾರೀ ಮಳೆಯಿಂದ ಕಲಬುರಗಿ ರಸ್ತೆಯ ಮೇಲೆ ನೀರು ತುಂಬಿಕೊಂಡಿದೆ. ಮುದುಗಲ್ ಪಟ್ಟಣದ ಸಮೀಪವಿರುವ ಹಳ್ಳದ ಮೇಲೇ ಸೇತುಂವೆ ಮೇಲೆ ತುಂಬಿ ನಿಂತ ನೀರೀನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ತೆಗೆದುಕೊಂಡು ಸೇತುವೆ ದಾಟಿಸಲು ಮುಂದಾದ ಚಾಲಕನಿಗೆ ಶಾಕ್ ಎದುರಾಗಿತ್ತು. ಫ ಸೆಳೆತ ಹಾಗೂ ಹರಿವು ಹೆಚ್ಚಾಗಿದ್ದರಿಂದ ಮಾರ್ಗ ಮದ್ಯೆಯೇ ಪ್ರಯಾಣಿಕರನ್ನು ಹೊತ್ತು ನಿಂತ ಬಸ್ ಕರಟ್ಟು ನಿಂತಿದೆ. ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ಬ್ರಿಡ್ಜ್ ಮೇಲೆ ಬಸ್ ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡಿದ ಪರಿಸ್ಥಿತಿ ನಡೆದಿದೆ.