K2kannadanews.in
Viral video ಲಿಂಗಸುಗೂರು : ಜಗತ್ತಿನಲ್ಲಿ (world) ಸಾಮಾನ್ಯವಾಗಿ ದುಡಿದು (Work) ತಿನ್ನೋರಿಗಿಂತ, ಕುಳಿತು ಹಾಳು ಮಾಡುವವರೇ ಹೆಚ್ಚಾಗಿರುವ ಕಾಲದಲ್ಲಿ, ಇಲ್ಲಬ್ಬ ವಿದ್ಯಾರ್ಥಿ (student) ತನ್ನ ಕುಟುಂಬಕ್ಕೆ (family) ಆಸರೆ ಆಗಲಿ ಅಂತ, ಶಾಲೆ (School) ಮುಗಸಿ, ಹೋಂವರ್ಕ (homework) ಮುಗಿಸಿ ನಂತರ ವ್ಯಾಪಾರ ಮಾಡಿ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದಾನೆ. ಇದಲ್ಲದೆ ಮಾದರಿ ಅಂದರೆ..
ಹೌದು X ನಲ್ಲಿ ಕನ್ನಡಿಗ ದೇವರಾಜ್ ಎಂಬುವವರ ಖಾತೆಯಿಂದ ಅಪ್ ಲೋಡ್ ಆಗಿರುವ ಈ ವೀಡಿಯೋ ನಿಜಕ್ಕು ಅರ್ಥಪೂರ್ಣವಾಗಿದೆ. ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದ ಬಸ್ ನಿಲ್ದಾಣದಲ್ಲಿ (Bus stop) ಮಾಡಿರುವ ವೀಡಿಯೋ ವ್ಯಕ್ತಿ ಏನು ನಿನ್ನ ಹೆಸರು, ಯಾವ ಕ್ಲಾಸ್ ಅಂತ ಕೇಳಿದಾಗ, ಬಾಲಕ ಆಕಾಶ್, ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಅಂತಾನೆ. ಅಮ್ಮ ಖರೀದಿ ಮಾಡಿತ್ಯಾರ, ಅವರು ಇಲ್ಲೇ ಮಾರ್ತಾರ. ಹತ್ರೂಪಾಯಿಗ್ 3, 20ಕ್ಕ ಏಳು ಹಣ್ಣು ಅಂತ ಆಕಾಶ್ ಹೇಳಿದಾಗ, ಹುಡುಗನ ಕಾನ್ಫಿಡೆನ್ಸ್ ನೋಡಿ. ನಾನು ಯಾವುದೇ ಲಾಭ ತೆಗೆದುಕೊಳಲ್ರೀ, ಎಲ್ಲಾ ಮಮ್ಮಿಗೆ ಕೊಡ್ತೀನ್ರಿ ಅನ್ನೊ ಮುಗ್ದತೆ ಇದಿಯಲ್ಲ ನಿಜಕ್ಕೂ ಮನಸ್ಸಿಗೆ ನೋಟುತ್ತೆ.
ಗಡಿಯಾರ ಚೌಕ ನ್ಯಾಗ ಬಾಡಿಗೆ ಮನ್ಯಾಗ ಅದೀವಿ. ನಾನು, ನಮ್ಮಣ್ಣ, ಅವ್ವ ಮತ್ತು ಅಪ್ಪ ಇದ್ದೀವಿ. ಹೋಂವರ್ಕ ಮಾಡಿದ್ಯ ಅನ್ನೋ ಪ್ರಶ್ನೆಗೆ ಹೂರೀ ಹಿಂದಿ, ಗಣಿತ, ಪರಿಸರ ಮತ್ತು ಕನ್ನಡ ಹೋಮ್ ವರ್ಕ್ ಕೊಟ್ಟಿದ್ರು. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಕಲ್ಯಾಣ ಕರ್ನಾಟಕ ಮಕ್ಕಳ ದಿನಚರಿ ಹೀಗೆಯೇ ಇರುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸರ್ಕಾರಿ ಮಕ್ಕಳು ಸಾಮಾನ್ಯ ಜ್ಞಾನವು ಹೇಗೆ ಕಲ್ಕೋತಾರೆ, ಅದೇ ಗ್ರೇಟ್ ಅನ್ನೋ ಕಾಮೆಂಟ್ ಮಾಡಿದ್ದಾರೆ.