K2kannadanews.in
local brand theft ಲಿಂಗಸುಗೂರು : ಡಾಬಾದ (Daba) ಬಾಗಿಲು (Door) ಮುರಿಯದೆ ಸಣ್ಣ ಸಂದಿಯಲ್ಲಿ ನುಗ್ಗಿ ಪ್ರತಿನಿತ್ಯ ಲೋಕಲ್ ಎಣ್ಣೆ (Local brand liquor) ಕದಿಯುತ್ತಿದ್ದ ವ್ಯಕ್ತಿಯೊಬ್ಬನ ಮುಖ ಸಿಸಿ ಟಿವಿ ಕ್ಯಾಮೆರಾದಲ್ಲಿ (CC camera) ಸೆರೆಯಾಗಿದೆ. ಖದಿಯಲು ಬಂದವನು ದುಡ್ಡು ಮಾತ್ರ ಅಲ್ಲದೇ ಲೊಕಲ್ ಬ್ರಾಂಡ್ ಎಣ್ಣೆಗಳನ್ನೂ ಕದಿಯುತ್ತಿದ್ದ.
ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಮಾಕಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೆಲದಿನಗಳಿಂದ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಕದ್ದು ಅದರ ಜೊತೆ ಒಟಿ (OT), ಓಸಿ (OC) ಸೇರಿದಂತೆ ಲೋಕಲ್ ಬ್ರಾಂಡ್ ಗಳ ಮದ್ಯ ಕದ್ದೊಯ್ಯುತ್ತಿದ್ದ. ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು.
ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂದ ಡಾಬಾ ಮಾಲೀಕರು ಮುದ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಣ್ಣೆ ಆಸೆಗೆ ಬಂದಿದ್ದ ಆತ ಮುಖಕ್ಕೆ ಮುಸುಕು ಧರಿಸಿರಲಿಲ್ಲ. ಹೀಗಾಗಿ ಕ್ಯಾಮೆರಾದಲ್ಲಿ ಆತನ ಚಹರೆ ಸಂಪೂರ್ಣವಾಗಿ ಸೆರೆಯಾಗಿದೆ.