K2kannadanews.in
Students Protest ಸಿರವಾರ : ಶಿಕ್ಷಕರ (Teacher) ವರ್ಗಾವಣೆ (Transfer) ಆದೇಶ ರದ್ದುಪಡಿಸುವಂತೆ (Cancel) ಒತ್ತಾಯಿಸಿ ಶಾಲೆ ಗೇಟ್ ಗೆ (school gate) ಬೀಗ (Lock) ಜಡಿದು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆ ನಡೆಸಿದ ಘಟನೆ ಗೊಲ್ಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಗೊಲ್ಲದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government school) ಘಟನೆ ನಡೆದಿದೆ. ಈ ಒಂದು ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ (Study) ಮಾಡುತ್ತಿದ್ದು ಖಾಯಂ ಶಿಕ್ಷಕರೆಂದು ಮೂರು ಜನ ಮಾತ್ರ ಇರುವುದು. ಇದೀಗ ಅವರಲ್ಲಿ ಓರ್ವ ಶಿಕ್ಷಕನನ್ನು ಚಿಕ್ಕಬಾದರದಿನದಿನ್ನಿ ಶಾಲೆಗೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿತ್ತು.
ಶಾಲೆಯ ಶಿಕ್ಷಕರು ಹೋದರೆ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗುತ್ತಾರೆ ಎಂಬ, ನಿಟ್ಟಿನಲ್ಲಿ ಎಸ್ ಡಿ ಎಂ ಸಿ (SDMC) ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಾಲಕರು (Parents) ಮತ್ತು ವಿದ್ಯಾರ್ಥಿಗಳು (students) ಇಂದು ಬೆಳಗ್ಗೆಯಿಂದ ಶಾಲೆಯ ಗೇಟ್ ಗೆ ಬೇಗ ಜಡೆದು ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಶಿಕ್ಷಕರು ಕೂಡ ಶಾಲೆಗೆ ಹೊರಗೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೋರಾಟದ ಮಾಹಿತಿ ತಿಳಿದಿದ್ದಂತೆ ಸ್ಥಳಕ್ಕೆ ಆಗಮಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಗ್ರಾಮಸ್ಥರ ಒತ್ತಡಕ್ಕೆ ಮಾಡಿರು ವರ್ಗಾವಣೆ ಆದೇಶ ಪತ್ರವನ್ನು ರದ್ದು ಪಡಿಸಿದ್ದಾರೆ.