ರಾಯಚೂರು : ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವಂತಹ ಒಂದು ಪಿಂಚಣಿ ವಂಚಿತ ನೌಕರರ ಸಂಘದ ಪ್ರತಿಭಟನೆ 139 ದಿನ ಪೂರೈಸಿದರು, ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ...
K2 ನ್ಯೂಸ್ ಡೆಸ್ಕ್ : ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಸಾಕಷ್ಟು ಕಂಡುಬರುತ್ತಿವೆ. ಅದರಲ್ಲೂ ದಿನಗೂಲಿ ನೌಕರರು ವಿವಿಧ ಒತ್ತಡಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೂರು ವರ್ಷಗಳಲ್ಲಿ ಒಂದು ಲಕ್ಷಕ್ಕೂ...
ಲಿಂಗಸುಗೂರು : ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪಾಲಕರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು...
ರಾಯಚೂರು : ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಕೃಷ್ಣ ರೈಲು ನಿಲ್ದಾಣದ ಬಳಿ ಯುವಕ ಯುವತಿ ಶವಗಳು ಪತ್ತೆಯಾಗಿದ್ದು ಪ್ರೇಮಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಕೃಷ್ಣ...
ಸಿಂಧನೂರು : ತಾಲ್ಲೂಕಿನ ಗುಂಜಳ್ಳಿ ಗ್ರಾಮದ ರೈತ ನಿಂಗಪ್ಪ ಖಾಸಗಿಯವರ ಬಡ್ಡಿ ಹಣ ಕಟ್ಟದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತಿ ಹಾಗೂ ಆತನ ಅಣ್ಣನ ಮಕ್ಕಳು ಸೇರಿಕೊಂಡು ಅವಿಭಕ್ತ ಕುಟುಂಬದಲ್ಲಿ ಸುಮಾರು 13 ಎಕರೆ ಜಮೀನುಗಳಲ್ಲಿ ಒಕ್ಕಲುತನ ಮಾಡಿಕೊಂಡು ಹೋಗುತ್ತಿದ್ದರು. ತುರ್ವಿಹಾಳ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.50 ಲಕ್ಷ, ಖಾಸಗಿ ವ್ಯಕ್ತಿಗಳಿಂದ ಸುಮಾರು 10 ಲಕ್ಷ ಸಾಲವನ್ನು ಭತ್ತದ ಬೆಳೆಗಾಗಿ ಪಡೆದುಕೊಂಡಿದ್ದರು. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ಇಳುವರಿ ಕಡಿಮೆ ಬಂದು ಬ್ಯಾಂಕಿನ ಸಾಲ ಕಟ್ಟಲಾಗಲಿಲ್ಲ. ಇತ್ತ ಖಾಸಗಿಯವರ ಬಡ್ಡಿ ಹಣ ಕಟ್ಟಲು ಆಗದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಶಿವಮ್ಮ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ರಾಯಚೂರು : ತಾಲೂಕಿನ ಬಿ.ಯದ್ಲಾಪುರ ಗ್ರಾಮದ ರೈತ ನಾಗಪ್ಪ (52) ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ ಗಿಲ್ಲೆಸೂಗೂರು ಹೋಬಳಿ ವ್ಯಾಪ್ತಿಯ ಬಿ.ಯದ್ಲಾಪುರದ ರೈತ ನಾಗಪ್ಪ ಹೆಚ್ ಡಿಎಫ್ ಸಿ ಬ್ಯಾಂಕಿನಲ್ಲಿ 9.60 ಲಕ್ಷ ಸಾಲ ಮಾಡಿಕೊಂಡಿದ್ದರು. 9 ಎಕರೆ ಜಮೀನಿನಲ್ಲಿ ಬೆಳೆಯನ್ನೂ ಬೆಳೆಯುತ್ತಿದ್ದರು. ಆದರೆ ಅವರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ವರ್ಷವಷ್ಟೇ ನಾಗಪ್ಪ ಅವರ ಹಿರಿಮಗ ಶಿವರಾಜ್ ಸಾಲಬಾಧೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...