ಸುದರ್ಶನ ಕ್ರಿಯೆ ಅತ್ಯಂತ ಮಹತ್ವದ್ದು : ಯೋಗ ತರಬೇತಿ ಶಿಬಿರ ಸಮಾರೋಪ..

K 2 Kannada News
ಸುದರ್ಶನ ಕ್ರಿಯೆ ಅತ್ಯಂತ ಮಹತ್ವದ್ದು : ಯೋಗ ತರಬೇತಿ ಶಿಬಿರ ಸಮಾರೋಪ..
WhatsApp Group Join Now
Telegram Group Join Now

K2kannadanews.in

Yoga training camp concluded ರಾಯಚೂರು : ಯೋಗಾಸನದಲ್ಲಿ (Yogasan) ಸುದರ್ಶನ ಕ್ರಿಯೆ (Sudarshana kriye) ಅತ್ಯಂತ ಮಹತ್ವದ್ದದ್ದು, ದೇಹ (Body), ಮನಸು (mind) ಹಾಗೂ ಆಧ್ಯಾತ್ಮಿಕತೆಯತ್ತ (Spirituality) ಕೊಂಡೊಯ್ಯುತ್ತದೆ ಎಂದು ಹತ್ತು ದಿನಗಳ (10 days) ಯೋಗ ತರಬೇತಿ ಶಿಬಿರ (Yoga training camp) ಸಮಾರೋಪ ಕಾರ್ಯಕ್ರಮದಲ್ಲಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಡಾ.ವಿ.ಜಿ.ಬಾವಲತ್ತಿ ಹೇಳಿದರು.

ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ಹಾಗೂ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಸಹಯೋಗದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದಲ್ಲಿ ಮಾತನಾಡುತ್ತ, ಅತಿಯಾದ ಒತ್ತಡದ (Stress) ಮದ್ಯೆ ಬದುಕಿಗ ಒಗ್ಗಿಕೊಂಡು ರೋಗಕ್ಕೆ ತುತ್ತಾಗುತ್ತಿದ್ದೇವೆ. ಮಾನಸಿಕ (Mental), ದೈಹಿಕ (Physically) ಹಾಗೂ ಆಧ್ಯಾತ್ಮಿಕ ಬದುಕು ಎಲ್ಲೆಲ್ಲೊ ಹೋಗುತ್ತಿದೆ ಎಂದರು. ಜಿಮ್ ಗೂ (Jem) ಯೋಗಕ್ಕೂ ಬಹಳ ವ್ಯತ್ಯಾಸವಿದೆ.‌ ದೈಹಿಕ ಪರಿಶ್ರಮ (workout) ಇದ್ದರೆ ಮಾತ್ರ ದೇಹ (BODY), ಹೃದಯ (heart) ಕೆಲಸ ಮಾಡಲಿದೆ ಎಂದ ಅವರು ಕನಿಷ್ಠ ಒತ್ತಡಗಳಿರಲಿ ಅತಿಯಾಗಿ ಬೇಡ. ಸುದರ್ಶನ ಕ್ರಿಯೆ ಅತ್ಯಂತ ಮಹತ್ವದ್ದು. ಕಲಿತ ಯೋಗಾಸನ, ಆಸನಗಳನ್ನು ನಿತ್ಯ ಜೀವನ‌ ಪರ್ಯಂತ ಮಾಡಬೇಕು ಇಲ್ಲವಾದರೆ ಉಪಯುಕ್ತ ಆಗದು. ಕಲಿತು ಬಿಡಬಾರದು ಎಂದರು.

ಪತ್ರಿಕಾ ಭವನದ ಮೇಲ್ಮಹಡಿಯಲ್ಲಿ‌ ನಡೆದ ಸಮಾರೋಪ ಪತ್ರಕರ್ತ ಚಂದ್ರಕಾಂತ ಮಸಾನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಪ್ರಾಸ್ತಾವಿಕವಾಗಿ ಗಿಲ್ಡ್ ಅಧ್ಯಕ್ಷರಾದ ಚೆನ್ನಬಸವಣ್ಣ ಮಾತನಾಡಿ, ದೈಹಿಕ, ಮಾನಸಿಕ ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಯೋಗಾಭ್ಯಾಸ ಅಗತ್ಯವಿದೆ ಎಂದು ಭಾವಿಸಿ ಶಿಬಿರ ಆಯೋಜಿಸಲಾಗಿತ್ತು ಎಂದರು. ಅರ್ಟ್ ಆಪ್ ಲಿವಿಂಗ್‌ ನ ಜೀವನ ಕಲೆ ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಶಿಬಿರಗಳಿಂದ ಸದ್ಬಳಕೆಯಾದರೆ ಅದುವೆ‌ ದೊಡ್ಡ ಕೊಡುಗೆಯಾಗಲಿದ್ದು ಯೋಗಾಸನಗಳನ್ನು ಎಲ್ಲರೂ ರೂಢಿಸಿಕೊಳ್ಳಲು ಸಲಹೆ ಮಾಡಿದರು.

ಯೋಗ ಶಿಬಿರದಲ್ಲಿ ತರಬೇತಿ ಪಡೆದ ಶ್ರೀಕಾಂತ ಸಾವೂರು, ಜಗನ್ನಾಥ ಪೂಜಾರಿ, ನೀಲಕಂಠ ಸ್ವಾಮಿ, ಚಂದ್ರಕಾಂತ ಮಸಾನಿ, ವೆಂಕಟೇಶ ಹೂಗಾರ, ಭೀಮೇಶ ಪೂಜಾರಿ, ಈರಣ್ಣ ಕರ್ಲಿ, ವಿಶಾಲ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ್ ಜಾಗಟಗಲ್ ಸೇರಿ ಪತ್ರಕರ್ತರಿದ್ದರು.

WhatsApp Group Join Now
Telegram Group Join Now
Share This Article