K2kannadanews.in
Scramble for chair ರಾಯಚೂರು : ರಾಜ್ಯಪಾಲರ ವಿರುದ್ಧ ಜಿಲ್ಲಾ ಕಾಂಗ್ರೆಸ್ (Congress)ನಿಂದ ಪ್ರತಿಭಟನೆ (protest) ಮಾಡುತ್ತಿದ್ದ ವೇಳೆ ಪ್ರತಿಭಟನೆಯಲ್ಲಿ ಕುರ್ಚಿ (Chare) ವಿಚಾರಕ್ಕೆ ಸಚಿವರ (minister) ಮುಂದೆಯೇ ಎಂಎಲ್ಸಿ (MLC) ಮತ್ತು ಮುಖಂಡ ಕಿತ್ತಾಡಿಕೊಂಡ ಘಟನೆ ನಡೆದಿದೆ.
ರಾಯಚೂರು (Raichur) ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ (DC office) ಪ್ರತಿಭಟನಾ ಮೆರವಣಿಗೆಯನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಚಿವ ಎನ್ ಎಸ್ ಬೋಸರಾಜ್ ಅವರು ಕೂಡ ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಂಎಲ್‌ಸಿ ವಸಂತಕುಮಾರ್ ಮತ್ತು ಜಿಂದಪ್ಪ ಅವರ ಮಧ್ಯ ಮಾತಿನ ಚಿಕ್ಕಮಕಿಯಾಗಿದೆ. ಪ್ರತಿಭಟನೆಯಲ್ಲಿ ಕೂರಲು ಚೇರ್ ವಿಚಾರಕ್ಕೆ ಈ ಒಂದು ಗಲಾಟೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಿಕ್ಕಮಕಿ ಉಂಟಾಗುತ್ತಿದ್ದಂತೆ, ಅಲ್ಲಿದ್ದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ಕ್ಷಣಕಾಲ ಗೊಂದಲದ ವಾತಾವರಣ ಉಂಟಾಗಿತ್ತು ತದನಂತರ ಪೊಲೀಸರು ಮಧ್ಯಪ್ರವೇಶಿಸಿ ಮುಖಂಡ ಜಿಂದಪ್ಪ ಅವರನ್ನು ಸಮಾಧಾನಗೊಳಿಸಿದರು.