ರೀ MLA ಸಾಹರಬ್ರೆ 2 ವರ್ಷ ಆಯ್ತು ಎಲ್ಲಿ ನೀರು : ಶಾಸಕರನ್ನು ತರಾಟೆ ತೆಗೆದುಕೊಂಡ ಜನ..

K 2 Kannada News
ರೀ MLA ಸಾಹರಬ್ರೆ 2 ವರ್ಷ ಆಯ್ತು ಎಲ್ಲಿ ನೀರು : ಶಾಸಕರನ್ನು ತರಾಟೆ ತೆಗೆದುಕೊಂಡ ಜನ..
WhatsApp Group Join Now
Telegram Group Join Now

K2kannadanews.in

Water problem ಮುದುಗಲ್ : ಶಾಸಕರಾಗಿ 2 ವರ್ಷ ಕಳೆಯಿತು. ನೀರಿನ ಸಮಸ್ಯೆ ಪರಿಹಾರ ಆಗಿಲ್ಲ. ಮುದಗಲ್ ಪಟ್ಟಣಕ್ಕೆ 16 ದಿನಗಳಿಗೊಮ್ಮೆ ನೀರು ಸರಬರಾಜುವಾಗುತ್ತಿದೆ. ನೀರಿನ ಸಮಸ್ಯೆಗೆ ಯಾವ ಕ್ರಮ ತೆಗೆದುಕೊಂಡಿರಿ ಎಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಿದ್ದರು ಆಗಮಿಸಿದ್ದ ಶಾಸಕರು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದುಗಲ್ ಪಟ್ಟಣ ಪಂಚಾಯಿತಿಗೆ ಕಸ ವಿಲೆವಾರಿ ವಾಹನಗಳ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಮಾನಪ್ಪ ಬಜ್ಜಲ್ ಅವರನ್ನು ಜನ ತರಾಟಗೆ ತೆಗೆದುಕೊಂಡಿದ್ದಾರೆ. ನೀರಿನ ಸಮಸ್ಯೆ ಪರಿಹಾರ ಮಾಡಿಕೊಡಿ ಎಂದು ಶಾಸಕರಿಗೆ ಕೇಳಿದರೆ ಶಾಸಕರ ಹಿಂಬಾಲಕರು ಹಾಗೂ ಜನರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಮಧ್ಯೆಪ್ರವೇಶಿಸಿ ವಾತವರಣ ತಿಳಿಗೊಳಿಸಿದರು.

ಕಳೆದ ಎರಡು ವರ್ಷಗಳಿಂದ ಮುದಗಲ್ ಪಟ್ಟಣಕ್ಕೆ ನೀರಿನ ಸಮಸ್ಯೆ ತಲೆದೂರಿದ್ದರು ಶಾಸಕರು ಇತ್ತ ಗಮನ ಹರಿದಿಲ್ಲ ಎಂಬುದೇ ಜನರ ಅಸಮಧಾನವಾಗಿತ್ತು. ಕಸ ವಿಲೇವಾರಿ ವಾಹನಗಳಿಗೆ ಶಾಸಕ ಮಾನಪ್ಪ ಚಾಲನೆ ನೀಡಿ ಮಾತನಾಡಿದರು. 3 ತಿಂಗಳಲ್ಲಿ ಅಮೃತ ಯೋಜನೆಯಡಿಯಲ್ಲಿ ಮುದಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇನೆ ಎಂದರು.

 

WhatsApp Group Join Now
Telegram Group Join Now
Share This Article