K2kannadanews.in
Protest against headmaster ಹಟ್ಟಿ : ನಾಲ್ಕು ವರ್ಷಗಳಿಂದ (4 years) ಶಾಲೆಗೆ ಅನಧಿಕೃತ ಗೈರಾಗುತ್ತಿದ್ದ (Absent) ಮುಖ್ಯ ಶಿಕ್ಷಕನ (Head master) ವಿರುದ್ಧ ಕ್ರಮ ಕೈಗೊಂಡು ಅಮಾನತ್ತು (Suspend) ಮಾಡುವಂತೆ ಆಗ್ರಹಿಸಿ ಕಳೆದ 7 ದಿನಗಳಿಂದ ನಡೆಸುತ್ತಿದ್ದ, ಧರಣಿಯ ಟೆಂಟ್ (Tent) ಪೊಲೀಸರು ಕಿತ್ತೆಸೆದು, ಡಾ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಭಾವಚಿತ್ರ ಇರುವ ಬ್ಯಾನರ್ (banar) ಬಿಸಾಡಿ ಅವಮಾನ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಎಸ್‌ಎಫ್‌ಐ (SFI), ಯಲಾಗಟ್ಟಾ ಪ್ರೌಢಶಾಲೆಯ ಎಸ್ಡಿಎಂಸಿ (SDMC), ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ವಿಧ್ಯಾರ್ಥಿಗಳು (Students) ತರಗತಿ ಬಹಿಷ್ಕರಿಸಿ ಗ್ರಾಮದ ಸರ್ಕಾರಿ ಪ್ರೌಢಶಾಲೆ (Government highschool) ಮುಖ್ಯ ಗುರುಗಳಾದ ನಾಗನಗೌಡ ಕ್ರಮಕ್ಕೆ ಆಗ್ರಹಿಸಿ ಕಳೆದ 7 ದಿನಗಳಿಂದ ನಡೆಸಲಾಗುತ್ತಿದೆ. ಪೊಲೀಸರ (Police) ದೌರ್ಜನ್ಯ ನಂತರ ಗ್ರಾಮದಲ್ಲಿ ಬೈಕ್ ರ‌್ಯಾಲಿ (Bike rally) ಮಾಡಿ, ಎಸ್ಡಿಎಂಸಿ ಹಾಗೂ ಗ್ರಾಮಸ್ಥರು ವಿವಿಧ ಸಂಘಟನೆಗಳು ಸಭೆ ಮಾಡಿ ನಾಳೆಯಿಂದ ಶಾಲೆಗೆ ಬಹಿಷ್ಕಾರ ಮಾಡುತ್ತೇವೆ. ನಾಳೆಯಿಂದ ನಮ್ಮ ಮಕ್ಕಳು (Children) ಶಾಲೆಗೆ ಹೋಗುವುದು ಬೇಡ ಎಂದು ನಿರ್ಧಾರ ಮಾಡಿದ್ದಾರೆ.
ಇನ್ನೂ ಟೆಂಟ್ ಕಿತ್ತಿ ಹಾಕಿರುವ ಪೊಲೀಸರು ಕಳೆದ 2 ದಿನಗಳಿಂದ ಧರಣಿ ಹತ್ತಿಕ್ಕಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸಂಘಟಕರಿಗೆ ಧಮಿಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಾಗನಗೌಡ ನ ಮೇಲೆ ಕ್ರಮ ಜರುಗಿಸಿ ಹೋರಾಟದ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.